Crime News: ವಿಂಗ್‌ ಕಮಾಂಡರ್‌ ಶಿಲಾದಿತ್ಯ ಬೋಸ್‌ ವಿಚಾರಣೆ; ಕಾರಿನ ಡ್ಯಾಶ್‌ ಕ್ಯಾಮೆರಾ ಕೇಳಿದ್ದಕ್ಕೆ ನೆಪ!

Share the Article

Crime News: ಕನ್ನಡಿಗ ಬೈಕ್‌ ಸವಾರ ವಿಕಾಸ್‌ ಕುಮಾರ್‌ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಿಲಾದಿತ್ಯ ಬೋಸ್‌ನನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಸುದೀರ್ಘ ವಿಚಾರಣೆ ನಡೆಸಿದ್ದಾರೆ. ತನ್ನ ಕಾರಿಗೆ ಬೈಕ್‌ ಗುದ್ದಿಸಿದ ಕಾರಣಕ್ಕೆ ಬೈಕ್‌ ಸವಾರನ ಜೊತೆ ಜಗಳವಾಯಿತು. ದುರುದ್ದೇಶದಿಂದ ಗಲಾಟೆ ಮಾಡಿಲ್ಲ ಎಂದು ವಿಂಗ್‌ ಕಮಾಂಡರ್‌ ಶಿಲಾದಿತ್ಯ ಬೋಸ್‌ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ.

ಕಾರಿನ ಡ್ಯಾಶ್‌ಬೋರ್ಡ್‌ ಕ್ಯಾಮೆರಾ ಫೆಬ್ರವರಿಯಲ್ಲಿ ಕೆಟ್ಟಿದ್ದು, ರಿಪೇರಿ ಮಾಡಲು ಕೊಟ್ಟಿದ್ದೇನೆ ಎಂದು ಸಮಜಾಯಿಷಿ ಬೇರೆ ನೀಡಿದ್ದಾನೆ. 3 ದಿನಗಳ ಬಳಿಕ ವಿಚಾರಣೆಗೆ ಬರುವಂತೆ ವಿಂಗ್‌ ಕಮಾಂಡರ್‌ಗೆ ಪೊಲೀಸರು ಸೂಚಿಸಿ ಕಳುಹಿಸಿದ್ದಾರೆ.

Comments are closed.