Panjab Gvt: ಸರ್ಕಾರಿ ನೌಕರರ ಫೋನ್ 24 ಗಂಟೆಯೂ ಆನ್ – ಸರ್ಕಾರದಿಂದ ಖಡಕ್ ಆದೇಶ

Panjab Gvt: ದಿನದ 24 ಗಂಟೆಗಳು ಹಾಗೂ ವಾರದ 7 ದಿನಗಳೂ ಎಲ್ಲಾ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ತಮ್ಮ ಫೋನ್‌ಗಳನ್ನು ಆನ್ನಲ್ಲೇ ಇಡಬೇಕು ಎಂದು ಪಂಜಾಬ್ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಹೌದು, ಸಿಬ್ಬಂದಿ ಇಲಾಖೆಯಿಂದ ಹೊರಬಿದ್ದಿರುವ ಈ ಆದೇಶವು ತಕ್ಷಣದಿಂದ ಜಾರಿಗೆ ಬರುವುದಾಗಿ ಹೇಳಲಾಗಿದೆ. ಇದರಲ್ಲಿ, ಕಾರ್ಯದರ್ಶಿ ಶ್ರೇಣಿ ಮತ್ತು ಅದಕ್ಕಿಂತ ಮೇಲಿನ ಅಧಿಕಾರಿಗಳು ತಮ್ಮ ಅಧೀನದಲ್ಲಿರುವ ನೌಕರರ ಫೋನ್ ಸದಾ ಲಭ್ಯವಾಗುವಂತೆ ಖಚಿತಪಡಿಸಿಕೊಳ್ಳಬೇಕೆಂದು ಸೂಚಿಸಲಾಗಿದೆ. ಕಚೇರಿ ಸಮಯದ ಹೊರಗಿದ್ದರೂ, ರಜಾದಿನಗಳಲ್ಲಿದ್ದರೂ, ನೌಕರರು ತಮ್ಮ ಫೋನ್‌ಗಳನ್ನು ಸ್ವಿಚ್ ಆಫ್ ಮಾಡದೇ ಇರಬೇಕು ಎಂದು ಈ ನಿರ್ದೇಶನದಲ್ಲಿದೆ.
ಎಲ್ಲಾ ವಿಶೇಷ ಮುಖ್ಯ ಕಾರ್ಯದರ್ಶಿಗಳು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಹಣಕಾಸು ಆಯುಕ್ತರು ಮತ್ತು ಕಾರ್ಯದರ್ಶಿಗಳು ತಮ್ಮ ಇಲಾಖೆಯ ಎಲ್ಲಾ ಅಧಿಕಾರಿಗಳು, ಪ್ರಮುಖವಾಗಿ ಕಾರ್ಯದರ್ಶಿ ಶ್ರೇಣಿ ಮತ್ತು ಅದಕ್ಕಿಂತ ಮೇಲಿನ ಅಧಿಕಾರಿಗಳು ತಮ್ಮ ಅಧೀನದಲ್ಲಿರುವ ನೌಕರರ ಫೋನ್ ಸದಾ ಲಭ್ಯವಾಗುವಂತೆ ಖಚಿತಪಡಿಸಿಕೊಳ್ಳಬೇಕೆಂದು ಎಂದು ಸರ್ಕಾರ ಕಡಕ್ ಆಗಿ ತಿಳಿಸಿದೆ.
ಇನ್ನು 2017ರಲ್ಲಿ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಅವಧಿಯಲ್ಲಿ ಇದೇ ರೀತಿಯ ಆದೇಶ ಜಾರಿಗೆ ಬಂದಿತ್ತು. ಆ ಸಮಯದಲ್ಲಿ, ಸರ್ಕಾರಿ ನೌಕರರ ಫೋನ್ ಬಿಲ್ಲುಗಳನ್ನು ಸರ್ಕಾರವೇ ಭರಿಸುವುದಾಗಿ ಘೋಷಿಸಲಾಗಿತ್ತು. ಆದರೆ, 2020ರಲ್ಲಿ ಸರ್ಕಾರ ತನ್ನ ವೆಚ್ಚ ಕಡಿಮೆ ಮಾಡಲು ಮೊಬೈಲ್ ಭತ್ಯೆಯನ್ನು ಅರ್ಧಕ್ಕೆ ಇಳಿಸುವ ನಿರ್ಧಾರ ತೆಗೆದುಕೊಂಡಿತ್ತು.
Comments are closed.