Mangalore: ಬೇಕರಿಯಲ್ಲಿ ಬೆಂಕಿ ಅವಘಡ; ಭಾರೀ ನಷ್ಟ!

Share the Article

Mangalore: ಬೇಕರಿಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿರುವ ಘಟನೆ ಮಂಗಳವಾರ (ಎ.29) ರ ಮುಂಜಾನೆ ನಡೆದಿರುವ ಕುರಿತು ವರದಿಯಾಗಿದೆ.

ನಗರದ ಪಾಂಡೇಶ್ವರ ಬಳಿಯ ಬೇಕರಿಯಲ್ಲಿ ಈ ಘಟನೆ ಸಂಭವಿಸಿದ್ದು, ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿದೆ ಎನ್ನುವ ಕುರಿತು ವರದಿಯಾಗಿದೆ. ಈ ಅವಘಡದಿಂದ ಐದು ಲಕ್ಷಕ್ಕೂ ಅಧಿಕ ಮೊತ್ತದ ವಸ್ತು ಬೆಂಕಿಗೆ ಅಹುತಿಯಾಗಿದ್ದು, ಲಕ್ಷಾಂತರ ರೂ. ನಷ್ಟವಾಗಿರುವ ಕುರಿತು ವರದಿಯಾಗಿದೆ.

ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ ಎಂದು ವರದಿಯಾಗಿದೆ.

Comments are closed.