Mangaluru : ‘ನಾನು ಭಾರತವನ್ನು ವಿರೋಧಿಸುತ್ತೇನೆ’ – ಮಂಗಳೂರು ವೈದ್ಯೆ ಅಫೀಫ ಫಾತಿಮಾಳಿಂದ ದೇಶ ವಿರೋಧಿ ಪೋಸ್ಟ್!!

Mangaluru : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ವೈದ್ಯ ಅಸೀಫ ಫಾತಿಮಾ ಅವರು ‘ನಾನು ಭಾರತವನ್ನು ವಿರೋಧಿಸುತ್ತೇನೆ’ ಎಂದು ದೇಶ ವಿರೋಧಿ ಪೋಸ್ಟ್ಂದನ್ನು ಹಾಕಿದ್ದಾರೆ. ಈ ಪೋಸ್ಟ್ ವೈರಲಾಗುತ್ತಿದ್ದಂತೆ ಅವರನ್ನು ಆಸ್ಪತ್ರೆಯು ವಜಾಗೊಳಿಸಿದೆ.

ಹೌದು ‘ಕಾಪಾಡಿ, ಕೊಳಕು ಹಿಂದೂಗಳು (Hindu) ನನ್ನ ಹಿಂದೆ ಬಿದ್ದಿದ್ದಾರೆ. ಹೌದು ನಾನು ಭಾರತೀಯಳು, ಹೌದು ನಾನು ಭಾರತವನ್ನು (India) ದ್ವೇಷಿಸುತ್ತೇನೆ’ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ (Mangalore) ವೈದ್ಯೆಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಸಂದೇಶ ಪ್ರಕಟಿಸಿದ್ದು ಇದೀಗ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.
ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆ ವೈದ್ಯೆ ಅಫೀಫ ಫಾತಿಮಾ ಎಂಬಾಕೆ ದೇಶ ವಿರೋಧಿ ಸಂದೇಶ ಪ್ರಕಟಿಸಿದ್ದು, ಸದ್ಯ ಆಕೆಯ ವಿರುದ್ಧ ಮಂಗಳೂರು ನಗರದ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಅಲ್ಲದೆ ಅಫೀಫ ಫಾತಿಮಾ ಪೋಸ್ಟ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಆಕೆಯನ್ನು ಹೈಲ್ಯಾಂಡ್ ಆಸ್ಪತ್ರೆ ಆಡಳಿತ ಮಂಡಳಿ ವಜಾಗೊಳಿಸಿದೆ
Comments are closed.