ಸಿದ್ದರಾಮಯ್ಯ, ಮಾದೇವಪ್ಪ, ಜಮೀರ್ ಪುತ್ರರು ಕಾಶ್ಮೀರಕ್ಕೆ ಹೋದ್ರೆ ಜಮೀರ್ ಪುತ್ರ ಮಾತ್ರ ವಾಪಸ್ ಬರ್ತಿದ್ದ – ಯತ್ನಾಳ್!

Share the Article

Bidar : ಜಮ್ಮು-ಕಾಶ್ಮೀರದ ಪಹಲ್ಲಾಮ್ ನ ಗುಂಡಿನ ದಾಳಿ ಬಳಿಕ 26 ಜನ ಬಲಿಯಾಗಿದ್ದಾರೆ. ಈ ಸಂದರ್ಭ ಪಾಕಿಸ್ತಾನದ ಮೇಲೆ ಯುದ್ಧ ಅನಿವಾರ್ಯ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಬಿಜೆಪಿ ಉಚ್ಚಾಟಿತ ನಾಯಕ ಬಸನಗೌಡ ಪಾಟೀಲ್‌ ಯತ್ನಾಳ್‌ ಸಿದ್ದರಾಮಯ್ಯರನ್ನು ಲೇವಡಿ ಮಾಡಿದ್ದಾರೆ. ಸಿದ್ದರಾಮಯ್ಯ ಮಗ, ಎಚ್ ಸಿ ಮಹಾದೇವಪ್ಪ ಮಗ ಮತ್ತು ಜಮೀರ ಅಹಮ್ಮದ್ ಮಗ ಏನಾದ್ರೂ ಕಾಶ್ಮೀರಕ್ಕೆ ಹೋಗಿದ್ರೆ, ಜಮೀರ್ ಮಗ ಮಾತ್ರ ವಾಪಸ್ ಬರ್ತಿದ್ದ ಎಂದು ಹೇಳಿದ್ದಾರೆ ಯತ್ನಾಳ್.

“ಇದು ಯಾಕಂದ್ರೆ ಸಿದ್ದರಾಮಯ್ಯ ಮಹಾದೇವಪ್ಪ ಮಕ್ಕಳು ಹಿಂದೂಗಳು. ಸಿಎಂ ಸಿದ್ದರಾಮಯ್ಯಗೆ ಮಾನ ಮರ್ಯಾದೆ ಇಲ್ಲ. ಪಾಕಿಸ್ತಾನ ಏಜೆಂಟರಂತೆ ವರ್ತಿಸುತ್ತಾರೆ. ಯುದ್ಧ ಬೇಕಾಗಿಲ್ಲ ಎಂದು ಹೇಳೋಕೆ ಸಿದ್ದರಾಮಯ್ಯ ಯಾರು? ಸಿದ್ದರಾಮಯ್ಯ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯೋ? ಪಾಕಿಸ್ತಾನದ ಒಂದು ರಾಜ್ಯದ ಮುಖ್ಯಮಂತ್ರಿಯೋ?” ಎಂದು ಬಸವನಗೌಡ ಪಾಟೀಲ್ ಯತ್ನಾಳ್ ತೀವ್ರ ವಾಗ್ದಾಳಿ ನಡೆಸಿದರು.

“ಇಂತಹ ನಾಲಯಕರನ್ನು ಹಿಂದೂಗಳು ಹೀನಾಯವಾಗಿ ಸೋಲಿಸಬೇಕು. ಆವಾಗ ಇವರಿಗೆ ಬುದ್ದಿ ಬರುತ್ತೆ. ಸಿದ್ದರಾಮಯ್ಯಗೆ ನಾಚಿಕೆ, ಮಾನ, ಮರ್ಯಾದೆ ಇಲ್ಲ. ಇವರು ಪಾಕಿಸ್ತಾನಕ್ಕೆ ಹುಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧವಾಗಿ ತೀವ್ರ ವಾಗ್ದಾಳಿಯನ್ನ ನಡೆಸಿದರು. ದೇಶದಲ್ಲಿ ಎಲ್ಲಿಯವರೆಗೆ ಹಿಂದೂಗಳು ಒಗ್ಗಟ್ಟು ಆಗುವುದಿಲ್ಲವೋ ಇಂತಹ ನಾಯಕರನ್ನು ಸೋಲಿಸುವವರಿಗೆ ಹೀಗೆ ಮಾಡುತ್ತಾರೆ. ಕಾಂಗ್ರೆಸ್ ನವರು ಮೊದಲು ಮಸೀದಿಗೆ ಹೋಗುತ್ತಿದ್ದರು. ಕಾಂಗ್ರೆಸ್ ನವರು ಇತ್ತೀಚಿಗೆ ದೇವಸ್ಥಾನಕ್ಕೆ ಹೋಗುತ್ತಿದ್ದಾರೆ. ನಾವು ನಮ್ಮ ದೇಶದ ಪರವಾಗಿ ಮಾತನಾಡಬೇಕು. ಪಾಕಿಸ್ತಾನದ ಏಜೆಂಟರಂತೆ ಮಾತನಾಡಿದರೆ ಬೇರೆ ಅರ್ಥ ಬರುತ್ತದೆ. ಮೋದಿಗೆ ಮುಸ್ಲಿಂ ದೇಶಗಳಿಂದ ಬೆಂಬಲ ಸಿಗುತ್ತಿದೆ, ನಕಲಿ ಮುಸ್ಲಿಮರಿಂದಲ್ಲ” ಎಂದು ಹೇಳಿಕೆ ನೀಡಿದರು.

ಜತೆಗೆ ದೇಶದಲ್ಲಿ ಹಿಂದೂಗಳೂ ಒಂದಾಗಿ ಇರಬೇಕು, ಜಾತಿ ಜಾತಿ ಅಂತ ಕಿತ್ತಾಡಬಾರದು ಎಂದು ಯತ್ನಾಳ್ ಅವರು ಹೇಳಿದರು. ಅಂಬೇಡ್ಕ‌ರ್ ಅವರೇ ದೇಶದಲ್ಲಿ ಇಸ್ಲಾಂ ಇದ್ದರೇ ಶಾಂತಿ ಇರಲ್ಲ ಎಂದಿದ್ರು.

Comments are closed.