Puttur: ಕೋಮು ದ್ವೇಷ ಸೃಷ್ಟಿಸುವ ವಾಟ್ಸಪ್‌ ಸಂದೇಶ ರವಾನೆ, ಪ್ರಕರಣ ದಾಖಲು

Share the Article

Puttur: ಕೋಮು ದ್ವೇಷ ಸೃಷ್ಟಿಸುವ ವಾಟ್ಸಪ್‌ ಗ್ರೂಪ್‌ಗಳಲ್ಲಿ ಸಂದೇಶ ರವಾನೆ ಮಾಡಿದ ಆರೋಪದಲ್ಲಿ ಯುವಕನೋರ್ವನ ವಿರುದ್ಧ ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಾಗಿದೆ.

ನಿನ್ನೆ, ಏ.27ರಂದು ಭಾನುವಾರ ನಗರ ಪೊಲೀಸ್ ಠಾಣೆ ಎಸ್.ಐ ಆಂಜನೇಯ ರೆಡ್ಡಿಯ ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಕೆಲವು ಕಡೆ ಗುಂಪು ಗುಂಪಾಗಿ ಸಾರ್ವಜನಿಕರು ವಾಟ್ಸಪ್ ಸಂದೇಶ ನೋಡುತ್ತಿದ್ದು ಕಂಡುಬಂದಿದೆ. ಆಗ ಕರೆದು ವಿಚಾರಿಸಿದಾಗ ಅನು ಪುತ್ತೂರು ಎಂಬವರ ಮೊಬೈಲ್‌ನಿಂದ ಕೋಮು ದ್ವೇಷ ಭಾವನೆ ಸೃಷ್ಟಿಸಬಹುದಾದ ಸಂದೇಶ ರವಾನಿಸಿರುವುದು ಬೆಳಕಿಗೆ ಬಂದಿತ್ತು.

ಪುತ್ತೂರಿನಲ್ಲಿ ಸರಕಾರಿ ಆಸ್ಪತ್ರೆಯ ಮಹಿಳಾ ವೈದ್ಯಾಧಿಕಾರಿಯವರ ಮೇಲೆ ಹಲ್ಲೆಗೆ ಯತ್ನಿಸಿ ಅನುಚಿತ ವರ್ತನೆ ಮಾಡಿದ ಆರೋಪಿ ಬಂಧಿಸುವ ವಿಚಾರದ ನೆಪದಲ್ಲಿ ಒಂದು ಧರ್ಮದ ವಿರುದ್ಧ ದ್ವೇಷ ಬಿತ್ತುವ ಬರಹಗಳನ್ನು ಬೇರೆ ಬೇರೆ ವಾಟ್ಸ್ ಆಪ್ ಗ್ರೂಪ್‌ಗಳಿಗೆ ಕಳುಹಿಸುತ್ತಿರುವುದು ಕಂಡು ಬಂದಿದೆ.
ಈ ಹಿನ್ನೆಲೆಯಲ್ಲಿ ಸಮುದಾಯಗಳ ನಡುವೆ ವೈಮನಸ್ಸು, ವೈರತ್ವ, ದ್ವೇಷ ಹಾಗೂ ಕೋಮು ಭಾವನೆ ಉಂಟು ಮಾಡಿ ಸಾರ್ವಜನಿಕ ನೆಮ್ಮದಿಗೆ ಭಂಗ ತರುವ ಸಾಧ್ಯತೆಗಳು ಇರುವುದರಿಂದ ಮತ್ತು ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗುವ ಸಂಭವ ಇರುವುದರಿಂದ ಆರೋಪಿಯ ಮೇಲೆ ಪ್ರಕರಣ ದಾಖಲಿಸಲಾಗಿದೆ.

Comments are closed.