15 ದಿನ ಮೂತ್ರ ಕುಡಿದ ಬಾಲಿವುಡ್ ನ ಸ್ಟಾರ್ ನಟ, ಯಾಕೆಂದು ಮಾತ್ರ ಕೇಳ್ಬೇಡಿ!

Share the Article

Mumbai: ಬಾಲಿವುಡ್ ಚಿತ್ರರಂಗದ ಸ್ಟಾರ್ ನಟರೊಬ್ಬರು ಸಂದರ್ಶನವೊಂದರಲ್ಲಿ ತಾನು ಮೂತ್ರ ಕುಡಿದ ವಿಷಯ ಹೇಳಿದ್ದಾರೆ. ಪರೇಶ್ ರಾವಲ್ ಬಾಲಿವುಡ್‌ನ ಜನಪ್ರಿಯ ಪೋಷಕ ನಟರಲ್ಲಿ ಒಬ್ಬರು. ಹಾಸ್ಯ, ಗಂಭೀರ ಪಾತ್ರಗಳ ಜತೆ ವಿಭಿನ್ನ ಮ್ಯಾನರಿಸಂ ಮೂಲಕ ಅವರು ಎಲ್ಲ ಪಾತ್ರಗಳಿಗೆ ನ್ಯಾಯ ಒದಗಿಸುವ 240ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡಿರುವ ನಟ.

ಅವರು ‘ಲಾಲಂಟಾಪ್’ ಯೂ ಟ್ಯೂಬ್ ಗೆ ನೀಡಿದ ಸಂದರ್ಶನದಲ್ಲಿ ಚಿತ್ರೀಕರಣದ ಸಂದರ್ಭದಲ್ಲಾದ ಅವಘಡದಿಂದ ಏನೆಲ್ಲ ಸಮಸ್ಯೆ ಎದುರಾಯಿತು ಮತ್ತು ಅದರಿಂದ ತಾನು ಹೇಗೆ ಪಾರಾಗಿ ಬಂದೆ ಎನ್ನುವುದರ ಬಗ್ಗೆ ಮಾತನಾಡಿದ್ದಾರೆ. ಒಂದು ಸಂದರ್ಭ ತಾನು ಮೂತ್ರ ಕುಡಿ ಬಂದಿತ್ತು ಎಂದು ಹೇಳಿದ್ದಾರೆ. ಕಾಲಿಗೆ ಆದ ಗಾಯವೊಂದನ್ನು ವಾಸಿ ಮಾಡಿಕೊಳ್ಳಲು ನಾನು ನನ್ನದೇ ಮೂತ್ರವನ್ನು ಕುಡಿದಿದ್ದೆ ಎಂದು ಪರೇಶ್‌ ಹೇಳಿಕೊಂಡಿದ್ದಾರೆ.

1996ರ ಸಂದರ್ಭ’ಘಾತಕ್’ ಸಿನಿಮಾ ಚಿತ್ರೀಕರಣದದಲ್ಲಿ ಅವಘಡ ಸಂಭವಿಸಿ ನನ್ನ ಕಾಲಿಗೆ ಏಟಾಗಿ ಗಾಯವಾಗಿತ್ತು. ಕಾಲಿಗೆ ಪೆಟ್ಟಾಗಿ ನಾನು ಆಸ್ಪತ್ರೆಯಲ್ಲಿ ದಾಖಲಾಗಿದ್ದೆ. ಈ ವೇಳೆ ನನ್ನನ್ನು ನೋಡಲು ಅಜಯ್ ದೇವಗನ್ ತಂದೆ ವೀರು ದೇವಗನ್ ಬಂದಿದ್ದರು. ಆಗ ಅವರು ನನ್ನ ಪರಿಸ್ಥಿತಿಯನ್ನು ನೋಡಿ ನನಗೊಂದು ಸಲಹೆ ನೀಡಿದ್ದರು. ‘ಪ್ರತಿದಿನ ಬೆಳಗ್ಗೆ ಮೊದಲು ಹುಯ್ಯುವ ಮೂತ್ರವನ್ನು ಕುಡಿಯಲು ಹೇಳಿದ್ದರು. ಆ ರೀತಿ ಮಾಡಿದರೆ ಗಾಯ ಬೇಗ ವಾಸಿ ಆಗುತ್ತದೆ ಎಂದಿದ್ದರು’.

ಅವರು ಹೇಳಿದಂತೆ ನಾನು 15 ದಿನಗಳ ಕಾಲ ನಾನು ನನ್ನ ಮೂತ್ರವನ್ನು ಕುಡಿದಿದ್ದೆ. ಬಿಯರ್ ಕುಡಿದಂತೆ ಸಿಪ್ ಬೈ ಸಿಪ್ ಕುಡಿಯುತ್ತಿದ್ದೆ. ಆ ಸಮಯದಲ್ಲಿ ಅವರು ಡ್ರಿಂಕ್ಸ್, ತಂಬಾಕು, ಮಾಂಸ ಕೂಡ ತ್ಯಜಿಸಿಲು ಹೇಳಿದ್ದರು. ಅದರಂತೆಯೇ ನಾನು ಮಾಡಿದ್ದೆ. ಕೆಲ ದಿನದ ನಂತ್ರ ನನ್ನ ಕಾಲಿನ ಎಕ್ಸ್‌ರೇ ತೆಗೆದ ವೈದ್ಯರು ಶಾಕ್ ಆಗಿದ್ದರು. ನನಗೂ ಎಕ್ಸ್‌ರೇಯಲ್ಲಿ ಬಿಳಿ ರೇಖೆ ಕಾಣಿಸಿತು. ಎರಡೂವರೆಗೆ ತಿಂಗಳು ಆಸ್ಪತ್ರೆಯಲ್ಲಿ ಇರಬೇಕೆಂದು ವೈದ್ಯರು ಮೊದಲು ಹೇಳಿದ್ದರು. ಆದರೆ ಎಲ್ಲವೂ ಸರಿಯಾಗಿ ಒಂದೂವರೆ ತಿಂಗಳಿಗೆ ನಾನು ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿ ಬಂದೆ ಎಂದು ಸ್ವಮೂತ್ರ ಪಾನದ ವಿಷಯ ಹೇಳಿದ್ದಾರೆ.

Comments are closed.