Bangalore: ರಸ್ತೆಗೆ ಕಸ ಎಸೆದಿದ್ದನ್ನು ಪ್ರಶ್ನಿಸಿದ ಪ್ರಾಧ್ಯಾಪಕಗೆ ಹಲ್ಲೆ ಮಾಡಿದವರ ಬಂಧನ!

Bangalore: ಇತ್ತೀಚೆಗೆ ಚಲಿಸುತ್ತಿದ್ದ ಆಟೋರಿಕ್ಷಾದೊಳಗೆ ಕುಳಿತು ರಸ್ತೆಗೆ ಕಸ ಎಸೆದಿದ್ದನ್ನು ಪ್ರಶ್ನಿಸಿದ್ದ ಪ್ರಾಧ್ಯಾಪಕನ ಮೇಲೆ ಹಲ್ಲೆಗೈದು ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಕುಮಾರಸ್ವಾಮಿ ಲೇಔಟ್ ಭಾನುಪ್ರಸಾದ್ (26), ಶರತ್ (23) ಹಾಗೂ ಅಮೃತ್ ಕುಮಾರ್(24) ಬಂಧಿತರು.
ಖಾಸಗಿ ಕಾಲೇಜಿನ ಪ್ರಾಧ್ಯಾಪಕ ಅರಬಿಂದೋ ಗುಪ್ತಾ ಏ.21ರಂದು ಜೆಎಚ್‌ಬಿಸಿಎಸ್ ಲೇಔಟ್‌ನಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವೇಳೆ ಇವರ ಮುಂದೆ ಆಟೋದಲ್ಲಿ ಹೋಗುತ್ತಿದ್ದ ಮೂವರು ಆಟೋದೊಳಗೆ ಕುಳಿತು ಕಸ ಹಾಗೂ ಗಾಜಿನ ಚೂರುಗಳನ್ನು ರಸ್ತೆಗೆ ಎಸೆದಿದ್ದಾರೆ. ಈ ವೇಳೆ ಅರಬಿಂದೋ ಗುಪ್ತಾ ಅವರು ಈ ರೀತಿ ರಸ್ತೆಗೆ ಕಸ ಎಸೆದರೆ ಇತರೆ ವಾಹನಗಳು ಸ್ಕಿಡ್ ಆಗುತ್ತವೆ ಎಂದು ಆರೋಪಿಗಳಿಗೆ ಹೇಳಿದ್ದಾರೆ. ಅಷ್ಟಕ್ಕೆ ಕೋಪಗೊಂಡಿದ್ದ ಆರೋಪಿಗಳು ಅರಬಿಂದೋ ಗುಪ್ತಾ ಜತೆಗೆ ಜಗಳ ತೆಗೆದು ಹಲ್ಲೆ ನಡೆಸಿ ಪರಾರಿಯಾಗಿದ್ದರು. ಗುಪ್ತಾ ವಿಡಿಯೋ ಮಾಡಿ ಘಟನೆ ಸಂಬಂಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದರು.
Comments are closed.