ಮಾಜಿ ಪತ್ನಿ ಮನೆಗೆ ಹಾಲಿ ಗೆಳತಿಯೊಂದಿಗೆ ಜಾಲಿಯಾಗಿ ಬಂದ ಆಮೀರ್ ಖಾನ್

Share the Article

Mumbai:ನಟ ಆಮೀರ್ ಖಾನ್ (Aamir Khan) ಅವರು ಏ.27ರಂದು ಗೆಳತಿ ಗೌರಿಯೊಂದಿಗೆ (Gauri Spratt) ಮಾಜಿ ಪತ್ನಿ ರೀನಾ ದತ್ತಾ ಮನೆಗೆ ಭೇಟಿ ನೀಡಿದ್ದಾರೆ. ಭೇಟಿ ಮಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಯಾಕೆ ಗೌರೀನ ಕರಕೊಂಡು ಹೋದರು ಅನ್ನೋದೇ ಈಗ ಮೂಡಿದ ಕುತೂಹಲ.

ಆಮೀರ್ ಮತ್ತು ಗೆಳತಿ ಗೌರಿ ಭಾನುವಾರದ ವಿಶೇಷವಾಗಿ ಮಾಜಿ ಪತ್ನಿ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ, ಆಮೀರ್ ಪುತ್ರ ಜುನೈದ್ ಖಾನ್ ಕೂಡ ಜೊತೆಗಿದ್ದಾರೆ. ಆಮೀರ್ ಖಾನ್ ಗೆಳತಿಯನ್ನು ಮಗನ ಮುಂದೆಯೇ ಮೊದಲ ಪತ್ನಿಯ ಮನೆಗೆ ಕರೆದುಕೊಂಡು ಹೋಗುತ್ತಿರುವ ದೃಶ್ಯವನ್ನು ನೋಡಿ ನೆಟ್ಟಿಗರು ಚಕಿತರಾಗಿ ನೋಡಿದ್ದಾರೆ.

ಅಂದಹಾಗೆ, ಆಮೀರ್ ಖಾನ್ 60ನೇ ವರ್ಷದ ಹುಟ್ಟುಹಬ್ಬ ಆಚರಿಸಿದ ಸಂದರ್ಭದಲ್ಲಿ ಮಾಧ್ಯಮಕ್ಕೆ ಡೇಟಿಂಗ್ ಬಗ್ಗೆ ಅಧಿಕೃತವಾಗಿ ತಿಳಿಸಿದ್ದರು. ಗೌರಿ ಜೊತೆ 1 ವರ್ಷದಿಂದ ಡೇಟಿಂಗ್ ಮಾಡುತ್ತಿದ್ದೇನೆ. ಅವರನ್ನು ಕಳೆದ 25 ವರ್ಷಗಳಿಗಿಂತ ಹೆಚ್ಚಿನ ಕಾಲದಿಂದ ಪರಿಚಿತಳು ಎಂದಿದ್ದರು ಅಮೀರ್. ಗೌರಿ.ಮೂಲತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ತಮ್ಮದೇ ನಿರ್ಮಾಣದ ಸಂಸ್ಥೆಯಡಿಯಲ್ಲಿ ಕೆಲಸ ಮಾಡುತ್ತಿರೋದಾಗಿ ಆಮೀರ್ ಮಾಹಿತಿ ನೀಡಿದ್ದರು.

ಗೌರಿಗೆ 6 ವರ್ಷದ ಮಗನಿದ್ದು, ನಾನು ಅವರೊಂದಿಗೆ ವಾಸಿಸುತ್ತಿದ್ದೇನೆ. ನಮ್ಮ ಕುಟುಂಬಸ್ಥರನ್ನು ಆಕೆ ಭೇಟಿಯಾಗಿದ್ದಾರೆ. ನಮ್ಮ ಸಂಬಂಧದ ಬಗ್ಗೆ ಮನೆಯವರಿಗೂ ಖುಷಿಯಿದೆ ಎಂದು ಹಂಚಿಕೊಂಡಿದ್ದರು. ಮೊದಲು ರೀನಾ ದತ್‌ಗೆ 2002ರಲ್ಲಿ ಡಿವೋರ್ಸ್ ನೀಡಲಾಗಿತ್ತು. 2021ರಲ್ಲಿ ಕಿರಣ್ ರಾವ್‌ಗೆ ಡಿವೋರ್ಸ್ ನೀಡಿ, ಈಗ ಮತ್ತೆ ಹೊಸ ಜೋಡಿ ಹುಡುಕಿಕೊಂಡಿದ್ದಾರೆ ಆಮೀರ್.

Comments are closed.