CM Siddaramaiah : ಪಾಕಿಸ್ತಾನ ಮೀಡಿಯಾಗಳಲ್ಲಿ ಫೇಮಸ್ ಆಗುತ್ತಿರುವ ವಿಚಾರ – ಸಿದ್ದು ಪ್ರತಿಕ್ರಿಯೆ ಏನು ಗೊತ್ತಾ?

CM Siddaramaiah : ಪಾಕಿಸ್ತಾನದ ಜೊತೆ ಯುದ್ಧ ಮಾಡುವ ಅನಿವಾರ್ಯತೆ ಇಲ್ಲ ಎಂದು ಹೇಳಿಕೆ ನೀಡುವುದರ ಮೂಲಕ ಪಾಕಿಸ್ತಾನದ ನ್ಯೂಸ್ ಮೀಡಿಯಾಗಳಲ್ಲಿ ಫೇಮಸ್ ಆಗುತ್ತಿರುವ ಸಿದ್ದರಾಮಯ್ಯ ಇದೀಗ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಹೌದು, ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಾಕಿಸ್ತಾನದ ಜೊತೆಗೆ ಯುದ್ಧ ಬೇಡ ಅಂತ ನಾನು ಹೇಳಿಲ್ಲ. ಅನಿವಾರ್ಯ ಆದ್ರೆ ಮಾಡಬೇಕು. ಯುದ್ಧದಿಂದಲೇ ಪರಿಹಾರ ಅಲ್ಲ, ಯುದ್ಧವೇ ಬೇಡವೇ ಬೇಡ ಎಂದು ನಾನು ಹೇಳಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಅಲ್ಲದೆ ಯುದ್ಧವೇ ಪರಿಹಾರವಲ್ಲ, ಕೇಂದ್ರ ಸರ್ಕಾರ ಭದ್ರತೆ ಕೊಡಬೇಕು ಅಲ್ಲವೇ? ಹಿಂದೆ 40 ಸೈನಿಕರು ಮೃತಪಟ್ಟಿದ್ದರು. ಈಗ 27 ಜನ ಸಾವನ್ನಪ್ಪಿದ್ದಾರೆ. ಯುದ್ಧ ಅನಿವಾರ್ಯವಾದರೆ ಮಾತ್ರ ಮಾಡಬೇಕು. ತಕ್ಷಣಕ್ಕೆ ಯುದ್ಧ ಬೇಡ ಎಂದು ಹೇಳಿದ್ದೇನೆ ಎಂದರು.
Comments are closed.