Arecanut : ನಿರೀಕ್ಷೆ ಮೀರಿ ಏರಿಕೆ ಕಂಡ ಅಡಿಕೆ ದರ – ಕ್ವಿಂಟಾಲ್ ಗೆ 96 ಸಾವಿರ!!

Arecanut : ರಾಜ್ಯದಲ್ಲಿ ಅಡಿಕೆ ದರವು ನಿರೀಕ್ಷೆಯನ್ನು ಮೀರಿ ಏರಿಕೆ ಕಾಣುತ್ತಿದೆ. ಇದರಿಂದಾಗಿ ಅಡಿಕೆ ಬೆಳೆಗಾರರಲ್ಲಿ ನಿಮ್ಮದಿ ಮೂಡಿದೆ. ಅಚ್ಚರಿಯೇನೆಂದರೆ ಕ್ವಿಂಟಲ್ ಗೆ 96,000 ರೂ ಗೆ ಅಡಿಕೆ ದರ ತಲುಪಿರುವುದು.
Belthangady: ಕಾಲೇಜು ವಿದ್ಯಾರ್ಥಿನಿಗೆ ಅಶ್ಲೀಲ ಮೆಸೇಜ್! ಅನ್ಯಕೋಮಿನ ಯುವಕ ಅರೆಸ್ಟ್
ಹೌದು, ಅತಿದೊಡ್ಡ ಅಡಕೆ ಮಾರುಕಟ್ಟೆ ಎಂದೇ ಹೇಳಲಾಗುವ ಶಿವಮೊಗ್ಗ ಎಪಿಎಂಸಿಯಲ್ಲಿ ಸರಕು ಅಡಿಕೆ ದರ ಕ್ವಿಂಟಾಲ್ ಗೆ ಒಂದು ಲಕ್ಷ ರೂ. ತಲುಪುವ ಆಶಾಭಾವನೆ ಮೂಡಿಸಿದೆ. ಏಪ್ರಿಲ್ 24ರಂದು ಸರಕು ಅಡಕೆ ಕ್ವಿಂಟಾಲ್ ಗೆ 96,340 ರೂ. ದರ ಸಿಕ್ಕಿದೆ.
Rikky Rai: ರಿಕ್ಕಿ ರೈ ಶೂಟ್ ಪ್ರಕರಣ: 6 ತಾಸು ಮುತ್ತಪ್ಪ ರೈ 2ನೇ ಪತ್ನಿ ಅನುರಾಧಾ ವಿಚಾರಣೆ!
ಅಂದಹಾಗೆ ಅತಿ ಹೆಚ್ಚು ಆವಕವಾಗುವ ಬೆಟ್ಟೆ, ರಾಶಿ, ಇಡಿ ಧಾರಣೆ ಕೂಡ 60 ಸಾವಿರ ರೂ. ಆಸುಪಾಸಿನಲ್ಲಿದೆ. ಚಾಲಿ ಅಡಕೆ ದರ 40 ರಿಂದ 45 ಸಾವಿರ ರೂ. ನಡುವೆ ಇದೆ. ದಶಕದ ಹಿಂದೆ ಸರಕು ಅಡಿಕೆ ದರ ಕ್ವಿಂಟಾಲ್ ಗೆ 95,000 ರೂ., ರಾಶಿ ಇಡಿ ಅಡಿಕೆ ದರ 80,000 ರೂ. ಗಡಿ ದಾಟಿತ್ತು. ಇದೀಗ ಸರಕು ಅಡಿಕೆಗೆ ಕ್ವಿಂಟಾಲ್ ಗೆ 96 ಸಾವಿರ ರೂ. ದರ ಬಂದಿದೆ.
Comments are closed.