Kolkata Court : ಮಹಿಳೆಯರ ಸ್ತನ ಹಿಡಿಯುವುದು ಅತ್ಯಾಚಾರವಲ್ಲ – ಹೈಕೋರ್ಟ್ ಅಚ್ಚರಿ ತೀರ್ಪು!!

Kolkata Court: ಮಹಿಳೆಯರ ಸ್ತನಗಳನ್ನು ಹಿಡಿಯುವುದು ಅಥವಾ ಅವರು ಧರಿಸಿದ ಪ್ಯಾಂಟ್, ಪೈಜಾಮವನ್ನು ಎಳೆಯುವುದು, ಅವುಗಳ ದಾರವನ್ನು ಹಿಡಿಯುವುದು ಅತ್ಯಾಚಾರ ಅಥವಾ ಅತ್ಯಾಚಾರಕ್ಕೆ ಯತ್ನ ಆಗುವುದಿಲ್ಲ ಎಂದು ಇತ್ತೀಚಿಗೆ ಅಲಹಾಬಾದ್ ಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಈ ಬೆನ್ನಲ್ಲೇ ಕೊಲ್ಕತ್ತಾ ಹೈಕೋರ್ಟ್ ಕೂಡ ಇದೇ ರೀತಿಯ ತೀರ್ಪು ಒಂದನ್ನು ನೀಡಿದೆ.

ಹೌದು, ವಿಚಾರಣೆ ಒಂದರ ವೇಳೆ ಕೊಲ್ಕತ್ತಾ ಹೈಕೋರ್ಟ್ ಮಹಿಳೆಯರ ಸ್ತನ ಹಿಡಿಯುವುದು ಅತ್ಯಾಚಾರದ ಪ್ರಯತ್ನ ಆಗುವುದಿಲ್ಲ ಇಂದು ತೀರ್ಪನ್ನು ನೀಡಿದೆ. ನ್ಯಾಯಮೂರ್ತಿಗಳಾದ ಅರಿಜಿತ್ ಬ್ಯಾನರ್ಜಿ ಮತ್ತು ಬಿಸ್ವರೂಪ್ ಚೌಧರಿ ಅವರ ನ್ಯಾಯಪೀಠವು ಆದೇಶದಲ್ಲಿ ಸಂತ್ರಸ್ತೆಯ ಸ್ತನಗಳನ್ನು ಮುಟ್ಟಲು ಪ್ರಯತ್ನಿಸುವುದು ಅತ್ಯಾಚಾರ ಪ್ರಯತ್ನದ ಅಪರಾಧವಾಗುವುದಿಲ್ಲ ಆದೇಶ ಹೊರಡಿಸಿದೆ.
ಹೀಗಾಗಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಲ್ಲಿ ವಿಚಾರಣಾ ನ್ಯಾಯಾಲಯದಿಂದ ತಪ್ಪಿತಸ್ಥನೆಂದು ಸಾಬೀತಾಗಿ 12 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯ ಶಿಕ್ಷೆಯನ್ನು ಕಲ್ಕತ್ತಾ ಹೈಕೋರ್ಟ್ ಶುಕ್ರವಾರ ಅಮಾನತುಗೊಳಿಸಿದೆ.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ‘ಸಂತ್ರಸ್ತ ಬಾಲಕಿಯ ಸಾಕ್ಷ್ಯ ಮತ್ತು ವೈದ್ಯಕೀಯ ಪರೀಕ್ಷಾ ವರದಿಯು ಮೇಲ್ನೋಟಕ್ಕೆ ಅರ್ಜಿದಾರರು ಸಂತ್ರಸ್ತ ಬಾಲಕಿಯ ಮೇಲೆ ಯಾವುದೇ ಒಳನುಸುಳುವಿಕೆ ಅಥವಾ ಅತ್ಯಾಚಾರ ಎಸಗಿದ್ದಾರೆ ಅಥವಾ ಅವನು ನುಸುಳಲು ಪ್ರಯತ್ನಿಸಿದ್ದಾನೆ ಎಂದು ಸೂಚಿಸುವುದಿಲ್ಲ. ಅರ್ಜಿದಾರರು ಮದ್ಯದ ಅಮಲಿನಲ್ಲಿದ್ದರು ಮತ್ತು ತನ್ನ ಸ್ತನಗಳನ್ನು ತಬ್ಬಿಕೊಳ್ಳಲು ಪ್ರಯತ್ನಿಸಿದ್ದರು ಎಂದು ಸಂತ್ರಸ್ತ ಬಾಲಕಿ ಹೇಳಿಕೆ ನೀಡಿದ್ದಾಳೆ. ಅಂತಹ ಪುರಾವೆಗಳು ಪೋಕ್ಸೊ ಕಾಯ್ದೆ, 2012 ರ ಸೆಕ್ಷನ್ 10 ರ ಅಡಿಯಲ್ಲಿ ಉಲ್ಬಣಗೊಂಡ ಲೈಂಗಿಕ ದೌರ್ಜನ್ಯದ ಆರೋಪವನ್ನು ಬೆಂಬಲಿಸಬಹುದು, ಆದರೆ ಮೇಲ್ನೋಟಕ್ಕೆ ಅತ್ಯಾಚಾರ ಪ್ರಯತ್ನದ ಅಪರಾಧವನ್ನು ಸೂಚಿಸುವುದಿಲ್ಲ” ಎಂದು ಹೇಳಿದೆ.
Comments are closed.