BPL Ration Card: ಬಿಪಿಎಲ್‌ ಕಾರ್ಡ್‌ದಾರರಿಗೆ ಗುಡ್‌ನ್ಯೂಸ್‌; ಮೇ ತಿಂಗಳಿನಿಂದ ಪಡಿತರ ಅಕ್ಕಿ ಜೊತೆ ರಾಗಿ, ಜೋಳ ವಿತರಣೆ!

Share the Article

BPL Ration Card: ಮೇ ತಿಂಗಳಿಂದ ಬಿಪಿಎಲ್ ಪಡಿತರ ಕಾರ್ಡ್‌ ದಾರರಿಗೆ ಅನ್ನ ಭಾಗ್ಯ ಯೋಜನೆಯಡಿ ಅಕ್ಕಿ ಜತೆಗೆ ರಾಗಿ ಹಾಗೂ ಜೋಳವೂ ಸಿಗಲಿದೆ

ಸದ್ಯ ಪ್ರತಿ ವ್ಯಕ್ತಿಗೆ ರಾಜ್ಯರಿಂದ 5 ಕೆಜಿ ಹಾಗೂ ಕೇಂದ್ರದಿಂದ 5 ಕೆ.ಜಿ. ಸೇರಿ ಒಟ್ಟು 10 ಕೆ.ಜಿ. ಅಕ್ಕಿ ವಿತರಿಸಲಾಗುತ್ತಿದೆ. ಈ ಪೈಕಿ ಗ್ರಾಹಕರಿಗೆ 2 ಅಥವಾ ಕೆ.ಜಿ. ರಾಗಿ/ಜೋಳ ನೀಡಲು ಆಹಾರ, ನಾಗರಿಕ ಪೂರೈಕೆ, ಗ್ರಾಹಕ ವ್ಯವಹಾರಗಳ ಇಲಾಖೆ ನಿರ್ಧರಿಸಿದೆ.

ಕಾಂಗ್ರೆಸ್ ಸರಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಅನ್ನಭಾಗ್ಯ’ ಯೋಜನೆಯಡಿ ಕೋಟ್ಯಂತರ ಜನರಿಗೆ ಉಚಿತವಾಗಿ ತಲಾ 10 ಕೆ.ಜಿ. ಅಕ್ಕಿ ಎಕಗಳಾಗುತ್ತಿದೆ. ಇದರೊಂದಿಗೆ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ 3ಕೆಜಿ ರಾಗಿ ಹಾಗೂ 2 ಕೆಜಿ ಅಕ್ಕಿ ಹಾಗೂ ಉತ್ತರದ ಜಿಲ್ಲೆಗಳಲ್ಲಿ 3 ಕೆ.ಜಿ. ಜೋಳ ಮತ್ತು 2 ಕೆ.ಜಿ. ಅಕ್ಕಿ ನೀಡಲಾಗುವುದು. ಫಲಾನುಭವಿಗಳಿಗೆ ನೀಡುತ್ತಿರುವ ಒಟ್ಟು ಪ್ರಮಾಣದಲ್ಲಿ ಪದಾರ್ಥಗಳನ್ನು ಬದಲಾವಣೆ ಮಾಡಲಾಗುವುದು. ಕೆಲವು ಭಾಗಗಳಲ್ಲಿ ರಾಗಿ ಬಳಸಿದರೆ, ಇನ್ನೂ ಕೆಲವು ಭಾಗಗಳಲ್ಲಿ ಜೋಳ ಬಳಸುತ್ತಾರೆ. ಹೀಗಾಗಿ, ಈ ಪದಾರ್ಥಗಳನ್ನೇ ಅಕ್ಕಿ ನೀಡಲಾಗುವುದು,” ಎಂದು ಆಹಾರ ಇಲಾಖೆಯ ದೆ ಅಧಿಕಾರಿಗಳು ತಿಳಿಸಿದ್ದಾರೆ.

Comments are closed.