Pahalgam: ಪಹಲ್ಗಾಮ್‌ನಲ್ಲಿ ಭದ್ರತಾ ಪಡೆ, ಭಾರತದ ಸೈನಿಕರು ಏಕೆ ಇರಲಿಲ್ಲ? ವಿರೋಧ ಪಕ್ಷದ ಪ್ರಶ್ನೆಗೆ ಕೇಂದ್ರ ಸರ್ಕಾರ ಹೇಳಿದ್ದೇನು?

Share the Article

Pahalgam: ಪಹಲ್ಗಾಮ್ ದಾಳಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. 26 ಪ್ರವಾಸಿಗರನ್ನು ಬಲಿಪಡಿದ ಉಗ್ರರ ದಾಳಿಯನ್ನು ವಿಶ್ವವೇ ಕಂಡಿಸಿದೆ. ಈ ಬೆನ್ನಲ್ಲೇ 26 ಪ್ರವಾಸಿಗರ ಬಲಿ ಪಡೆದ ಪಹಲ್ಗಾಮ್ ದಾಳಿಯ ನಂತರ ಆ ಪ್ರದೇಶದಲ್ಲಿ ಏಕೆ ಯೋಧರು ಇರಲಿಲ್ಲ?ಭದ್ರತಾ ಪಡೆ ಏಕೆ ನಿಯೋಜಿಸಿರಲಿಲ್ಲ ಎಂಬುದು ಅನೇಕರ ಪ್ರಶ್ನೆಯಾಗಿತ್ತು? ಸರ್ವ ಪಕ್ಷಗಳ ಸಭೆಯಲ್ಲಿ ವಿರೋಧ ಪಕ್ಷಗಳಿಂದ ಇದೇ ಪ್ರಶ್ನೆ ಎದುರಾಯಿತು. ಇದಕ್ಕೆ ಕೇಂದ್ರ ಏನೆಂದು ಉತ್ತರಿಸಿತು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ.

ಹೌದು, ಗುರುವಾರ ಸಂಜೆ ನಡೆದ ಸರ್ವಪಕ್ಷ ಸಭೆಯಲ್ಲಿ 26 ನಾಗರಿಕರ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಪ್ರತಿಪಕ್ಷಗಳು ಕೇಂದ್ರದ ವಿರುದ್ಧ ಬಹಳ ತೀಕ್ಷ್ಣವಾದ ಪ್ರಶ್ನೆಗಳನ್ನು ಕೇಳಿದವು. ಈ ವೇಳೆ ಪಹಲ್ಗಾಮ್ ದಾಳಿಯ ನಂತರ ಆ ಪ್ರದೇಶದಲ್ಲಿ ಏಕೆ ಯೋಧರು ಇರಲಿಲ್ಲ?ಭದ್ರತಾ ಪಡೆ ಏಕೆ ನಿಯೋಜಿಸಿರಲಿಲ್ಲ ಎಂಬುದು ಪ್ರಮುಖ ಪ್ರಶ್ನೆ ಆಗಿತ್ತು.

ಇದಕ್ಕೆ ಉತ್ತರಿಸುತ್ತಾ ಕೇಂದ್ರ ಸರ್ಕಾರ, ಜೂನ್‌ನಲ್ಲಿ ಪ್ರಾರಂಭವಾಗುವ ವಾರ್ಷಿಕ ಅಮರನಾಥ ಯಾತ್ರೆಗೆ ಮುಂಚಿತವಾಗಿ ಬೈಸರನ್ ಪ್ರದೇಶವನ್ನು ವಾಡಿಕೆಯಂತೆ ಭದ್ರಪಡಿಸಲಾಗುತ್ತದೆ. ಆಗ ಆ ಮಾರ್ಗವನ್ನು ಅಧಿಕೃತವಾಗಿ ತೆರೆಯಲಾಗುತ್ತದೆ ಮತ್ತು ಅಮರನಾಥ ದೇಗುಲಕ್ಕೆ ಹೋಗುವ ಮಾರ್ಗದಲ್ಲಿ ಈ ಬೈಸರನ್‌ ಪ್ರದೇಶವಿದ್ದು, ಇಲ್ಲಿ ವಿಶ್ರಾಂತಿ ಪಡೆಯುವ ಯಾತ್ರಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಭದ್ರತಾ ಪಡೆಗಳನ್ನು ಆ ಸಂದರ್ಭದಲ್ಲಿ ಅಲ್ಲಿ ನಿಯೋಜಿಸಲಾಗುತ್ತದೆ.

ಆದರೆ ಜಮ್ಮುಕಾಶ್ಮೀರದ ಸ್ಥಳೀಯ ಪ್ರವಾಸ ನಿರ್ವಾಹಕರು ಏಪ್ರಿಲ್ 20 ರಿಂದಲೇ ಈ ಪ್ರದೇಶಕ್ಕೆ ಬೇರೆಡೆಯಿಂದ ಪ್ರವಾಸಿಗರನ್ನು ಕರೆದೊಯ್ಯಲು ಪ್ರಾರಂಭಿಸಿದರು. ಅಂದರೆ ಅಮರನಾಥ ಯಾತ್ರಾ ಋತುವಿಗೆ ಭದ್ರತೆಯನ್ನು ಸಜ್ಜುಗೊಳಿಸುವ ಮೊದಲೇ ಪ್ರವಾಸಿ ಏಜೆನ್ಸಿಗಳು ಇಲ್ಲಿಗೆ ಪ್ರವಾಸಿಗರನ್ನು ಕರೆದೊಯ್ಯಲು ಆರಂಭಿಸಿದರು. ಆದರೆ ಈ ಬಗ್ಗೆ ಪ್ರವಾಸಿ ಏಜೆನ್ಸಿಗಳು ಸ್ಥಳೀಯ ಆಡಳಿತಕ್ಕೆ ಯಾವುದೇ ಮಾಹಿತಿಯನ್ನು ನೀಡಿರಲಿಲ್ಲ. ಹೀಗಾಗಿ ಯಾವುದೇ ಭದ್ರತಾ ಪಡೆಗಳನ್ನು ಅಲ್ಲಿ ನಿಯೋಜಿಸಿರಲಾಗಿಲ್ಲ ಎಂದು ಸರ್ಕಾರ ಮಾಹಿತಿ ನೀಡಿದೆ.

Comments are closed.