New Delhi: ಪಹಲ್ಗಾಮ್‌ ಉಗ್ರರ ದಾಳಿಯಲ್ಲಿ ಮಡಿದ ಲೆ.ವಿನಯ್‌ ಅವರ ವಿಡಿಯೋದ ನಿಜಾಂಶವೇನು?

Share the Article

New Delhi: ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್‌ ವಿನಯ್‌ ನರ್ವಾಲ್‌ ಹೆಸರಿನಲ್ಲಿ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಆದರೆ ಈ ವಿಡಿಯೋದ ಅಸಲಿಯತ್ತು ಬೇರೆ ಇದೆ.

ಈ ವಿಡಿಯೋದಲ್ಲಿ ಕಂಡು ಬರುವ ದಂಪತಿ ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಈ ವೀಡಿಯೋ ಹಂಚಿಕೊಳ್ಳುವ ಮೂಲಕ ನಾವು ಇನ್ನೂ ಜೀವಂತವಾಗಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ವೈರಲ್‌ ವೀಡಿಯೋದಲ್ಲಿರುವ ದಂಪತಿ ಯಶಿಕಾ ಶರ್ಮಾ ಮತ್ತು ಆಕೆಯ ಪತಿ ಆಶಿಶ್‌ ಸೆಹ್ರಾವತ್.‌ ಯಾಶಿಕಾ ವೃತ್ತಿಯಲ್ಲಿ ಕ್ಯಾಬಿನ್‌ ಸಿಬ್ಬಂದಿ ಮತ್ತು ವ್ಲಾಗರ್.‌ ಆಶಿಶ್‌ ಕ್ರಿಕೆಟಿಗ ಮತ್ತು ರಣಜಿ ಟ್ರೋಫಿ ಆಟಗಾರ.

ವೀಡಿಯೋದಲ್ಲಿರುವ ನಾವು ಇನ್ನೂ ಜೀವಂತವಾಗಿದ್ದೇವೆ. ನಮ್ಮ ಹೆಸರಿನ ಮೇಲೆ RIP ಎಂದು ಬರೆದಿದ್ದೀರಿ ಎಂದು ದಂಪತಿ ವೀಡಿಯೋದಲ್ಲಿ ಹೇಳಿದ್ದಾರೆ. ಇದರಿಂದ ನಾನು ಮತ್ತು ನನ್ನ ಕುಟುಂಬ ಅಸಮಾಧಾನಗೊಂಡಿದ್ದೇವೆ. ಈ ಮೂಲಕ ನೀವು ಜೀವಂತದಲ್ಲಿರುವವರನ್ನು ಕೊಂದಿದ್ದೀರಿ. ಈ ರೀತಿ ಮಾಡಬೇಡಿ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

Comments are closed.