Viral Video : ಕ್ರೀಡಾಂಗಣದಲ್ಲಿ ಕ್ರಿಕೆಟ್ ನೋಡುತ್ತಾ ಉತ್ತರ ಪತ್ರಿಕೆ ತಿದ್ದಿದ ಶಿಕ್ಷಕಿ!! ವಿಡಿಯೋ ವೈರಲ್

Share the Article

Viral Video : ಕ್ರಿಕೆಟ್ ಪ್ರೇಮಿಯಾಗಿರುವ ಶಿಕ್ಷಕಿ ಒಬ್ಬರು ಕ್ರೀಡಾಂಗಣದಲ್ಲಿ ಕ್ರಿಕೆಟ್ ನೋಡುತ್ತಾ ಮಕ್ಕಳ ಪರೀಕ್ಷೆಯ ಉತ್ತರ ಪತ್ರಿಕೆಯನ್ನು ತಿದ್ದುತ್ತಿರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

 

View this post on Instagram

 

A post shared by رِدا چوہدری (@pct_x_rida)

ಹೌದು, ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್), ಪ್ರಸ್ತುತ ನಡೆಯುತ್ತಿದೆ. ಪಿಎಸ್‌ಎಲ್ ಪಂದ್ಯದ ಸಮಯದಲ್ಲಿ ಶಾಲಾ ಶಿಕ್ಷಕಿಯೊಬ್ಬಳು ಕ್ರೀಡಾಂಗಣದಲ್ಲಿ ಕುಳಿತು ತನ್ನ ವಿದ್ಯಾರ್ಥಿಗಳ ಉತ್ತರಪತ್ರಿಕೆಗಳನ್ನು ಪರಿಶೀಲಿಸಿದ್ದಾಳೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದೆ. ಇದನ್ನು ನೋಡಿ ನೆಟ್ಟಿಗರು ಶಾಕ್‌ ಆಗಿದ್ದಾರೆ.

ವೈರಲ್ ಆದ ವಿಡಿಯೊದಲ್ಲಿ ಮಹಿಳಾ ಶಿಕ್ಷಕಿ ಪಂದ್ಯವನ್ನು ವೀಕ್ಷಿಸುತ್ತಾ ತನ್ನ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಪರಿಶೀಲಿಸುತ್ತಿರುವುದು ಸೆರೆಯಾಗಿದೆ. ಕ್ಯಾಮೆರಾ ಅದರ ಮೇಲೆ ಜೂಮ್ ಮಾಡಿದ ತಕ್ಷಣ ಅವಳ ಪಕ್ಕದಲ್ಲಿ ಕುಳಿತ ಹುಡುಗನೊಬ್ಬ ಆಕೆಗೆ ಕ್ಯಾಮರಾವನ್ನು ತೋರಿಸಿದಾಗ,ಶಿಕ್ಷಕಿ ಆತಂಕಕ್ಕೊಳಗಾಗಿ ಬೇಗನೆ ಪತ್ರಿಕೆಗಳನ್ನು ಮುಚ್ಚಿದ್ದಾಳೆ. ಈ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ.

Comments are closed.