Kodagu: ಸಿದ್ದಾಪುರ: ಕಾಡಾನೆ ದಾಳಿಗೆ ಮತ್ತೊಂದು ಜೀವ ಬಲಿ!

Share the Article

Kodagu: ಸಿದ್ದಾಪುರ ಗ್ರಾಮ ಪಂಚಾಯಿತಿ ಸದಸ್ಯ ಜಯಂತ್ ರವರ ತಂದೆ, ಕರಡಿಗೋಡು ಬಸವನಹಳ್ಳಿ ಹಾಡಿ ಸಮೀಪದ ನಿವಾಸಿ ಸೊಳ್ಳೆಕೋಡಿ ಚಿಣ್ಣಪ್ಪ (76) ಎಂಬುವರು ಕಾಡಾನೆಯ ದಾಳಿಗೆ ಬಲಿಯಾಗಿದ್ದಾರೆ.

ಎ. 24 ಬೆಳಗಿನ ಜಾವ 1.30 ರ ಸಮಯದಲ್ಲಿ ಅಟ್ಟಣಿಗೆಯಲ್ಲಿ ಮಲಗಿದ್ದ ಚಿಣ್ಣಪ್ಪ ಅವರು ಕಾಡಾನೆಯ ಶಬ್ದಕ್ಕೆ ಹೊರಗೆ ಬಂದಿದ್ದಾರೆ. ಈ ಸಂದರ್ಭ ಅಲ್ಲಿಯೇ ಇದ್ದ ಕಾಡಾನೆ ಅವರ ಮೇಲೆ ದಿಢೀರ್ ದಾಳಿ ನಡೆಸಿ ಸಾಯಿಸಿದೆ.

Comments are closed.