Ranya Rao: ರನ್ಯಾರಾವ್ ವಿರುದ್ಧ ಕಾಫಿಪೋಸಾ ಜಾರಿ!

Ranya Rao: ಸ್ಯಾಂಡಲ್‌ವುಡ್ ನಟಿ ರನ್ಯಾರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ ಸಂಬಂಧಪಟ್ಟಂತೆ ಬಿಗ್‌ಟ್ವಿಸ್ಟ್ ದೊರಕಿದೆ. ರನ್ಯಾರಾವ್ ಮತ್ತು ಸಂಗಡಿಗರು 1 ವರ್ಷ ಜೈಲಿನಲ್ಲಿ ಇರಬೇಕಾದ ಅನಿವಾರ್ಯತೆ ಎದುರಾಗಿದೆ.
ರನ್ಯಾರಾವ್ ವಿರುದ್ಧ ಕಾಫಿಪೋಸಾ ಕಾಯ್ದೆಯನ್ನು (COFEPOSA Act) ಜಾರಿ ಮಾಡಲಾಗಿದೆ. ಹೀಗಾಗಿ ರನ್ಯಾರಾವ್ 1 ವರ್ಷ ಕಾಲ ಜೈಲಿನಲ್ಲಿಯೇ ಇರಬೇಕಾದ ಅನಿವಾರ್ಯ ಉಂಟಾಗಿದೆ. ತನಿಖೆಯಲ್ಲಿ ರನ್ಯಾರಾವ್ 100 ಕೆಜಿಯಷ್ಟು ಚಿನ್ನವನ್ನು ವಿದೇಶದಿಂದ ಕಳ್ಳ ಸಾಗಾಣೆ ಮಾಡಿರುವುದು ಬಹಿರಂಗವಾಗಿದ್ದು, ಹೀಗಾಗಿ ರನ್ಯಾ ರಾವ್, ತರುಣ್ ಕೊಂಡಾರಾಜ್ ಮತ್ತು ಸಾಹಿಲ್ ಜೈನ್ ವಿರುದ್ಧ ಕಾಫಿಪೋಸಾ ಜಾರಿ ಮಾಡಲಾಗಿದೆ.
ಕಾಫಿಪೋಸಾ ಎಂದರೆ ವಿದೇಶಿ ವಿನಿಯಮ ನಿಯಂತ್ರಣ ಹಾಗೂ ಕಳ್ಳ ಸಾಗಾಣಿಕೆ ತಡೆ ಕಾಯ್ದೆಯಾಗಿದೆ. ಇದನ್ನು ಕಳ್ಳಸಾಗಣೆ ಮಾಡುವವರ ವಿರುದ್ಧ ಹಾಕಲಾಗುತ್ತದೆ. ಆರೋಪಿಯು ಜಾಮೀನು ಪಡೆಯಬಾರದು ಎಂಬುವುದು ಇದರ ಮೂಲ ಉದ್ದೇಶವಾಗಿದೆ.
ಆರೋಪಿಯು ಜಾಮೀನು ಪಡೆದು ಹೊರಗೆ ಬಂದರೆ ಮತ್ತೆ ಕಳ್ಳ ಸಾಗಾಣಿಕೆ ಮಾಡುತ್ತಾರೆ. ಅಲ್ಲದೇ ಜೈಲಿನಿಂದ ಬಂದ ನಂತರ ತಪ್ಪಿಸಿಕೊಳ್ಳಬಹುದು. ತನಿಖೆಗೆ ಸರಿಯಾಗಿ ಸಹಕಾರ ಕೊಡದೇ, ನಿರಂತರವಾಗಿ ಸ್ಮಗ್ಲಿಂಗ್‌ನಲ್ಲಿ ಮುಂದುವರೆಯುತ್ತಾರೆ ಎಂದು ಕಾಯ್ದೆ ಜಾರಿಗೊಳಿಸಲಾಗುತ್ತದೆ ಎಂದು ವರದಿಯಾಗಿದೆ.
Comments are closed.