Death: ಆಕಸ್ಮಿಕವಾಗಿ ಪೇಂಟ್‌ ಆಯಿಲ್‌ ಕುಡಿದ ಒಂದೂವರೆ ವರ್ಷದ ಮಗು ಸಾವು!

Share the Article

Death: ಆಕಸ್ಮಿಕವಾಗಿ ಪೇಂಟ್‌ ಆಯಿಲ್‌ ಕುಡಿದು ಒಂದೂವರೆ ವರ್ಷದ ಮಗು ಸಾವನ್ನಪ್ಪಿರುವ ಘಟನೆ ಗುರುಗ್ರಾಮದ ಬಿಲಾಸ್ಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ಸಿಧ್ರಾವಲಿ ಗ್ರಾಮದಲ್ಲಿ ನಡೆದಿದೆ.

ಮನೆಯೊಳಗೆ ಇರಿಸಲಾಗಿದ್ದ ರಾಸಾಯನಿಕದ ಬಾಟಲಿಯಿಂದ ಬಾಲಕಿ ಕುಡಿದಿದ್ದು, ಆರೋಗ್ಯ ಹದಗೆಟ್ಟಿದೆ. ಕೂಡಲೇ ಬಿಲಾಸ್ಪುರ ಪ್ರದೇಶದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ನಂತರ ಇನ್ನೊಂದು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬುಧವಾರ ಮಗು ಅಸುನೀಗಿದೆ.

ಧಮೇಂದರ್‌ ಕುಮಾರ್‌ ಐಎಂಟಿ ಮಾನೇಸರ್‌ನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಇವರ ಕುಟುಂಬ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಇವರಿಗೆ ಮೂವರು ಮಕ್ಕಳು. ಇಬ್ಬರು ಹೆಣ್ಣುಮಕ್ಕಳು, ಒಬ್ಬ ಮಗ ಇದ್ದಾನೆ.

ಬುಧವಾರ ಬೆಳಿಗ್ಗೆ ತನ್ನ ಮನೆಯಲ್ಲಿ ಕೂಲರ್‌ಗೆ ಪೇಂಟ್‌ ಮಾಡುತ್ತಿರುವಾಗ ಮಗಳು ದೀಕ್ಷಾ ಆಟವಾಡುತ್ತಾ ಬಳಿಗೆ ಬಂದಿದ್ದು, ನೆಲದ ಮೇಲೆ ಇಟ್ಟಿದ್ದ ಬಣ್ಣದ ಡಬ್ಬವನ್ನು ಎತ್ತಿಕೊಂಡು ಕುಡಿದಿದ್ದಾಳೆ. ಕೆಲವೇ ನಿಮಿಷದಲ್ಲಿ ಮಗುವಿನ ಆರೋಗ್ಯ ಹದಗೆಟ್ಟಿದೆ. ಕೂಡಲೇ ಮಗುವನ್ನು ಕುಮಾರ್‌ ಎತ್ತಿಕೊಂಡು ಬಿಲಾಸ್ಪುರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೂ ಮಗು ಉಳಿಯಲಿಲ್ಲ.

ಗುರುವಾರ ಶವಪರೀಕ್ಷೆಯ ನಂತರ ಪೊಲೀಸರು ಮಗುವಿನ ದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

Comments are closed.