Gokarna: ಪ್ರವಾಸಕ್ಕೆ ಬಂದು ಸಮುದ್ರದ ಅಲೆಗೆ ಕೊಚ್ಚಿ ಹೋದ ಮೆಡಿಕಲ್ ವಿದ್ಯಾರ್ಥಿನಿಯರು!!

Share the Article

Gokarna: ಗೋಕರ್ಣಕ್ಕೆ ಪ್ರವಾಸಕ್ಕೆ ಬಂದಿದ್ದ ತಮಿಳುನಾಡಿನ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯರಿಬ್ಪರು ಸಮುದ್ರದ ಅಲೆಗಳ ಹೊಡೆತಕ್ಕೆ ಕೊಚ್ಚಿ ಹೋಗಿ ಮೃತ ಪಟ್ಟ ಘಟನೆ ಸಂಭವಿಸಿದೆ.

ಹೌದು, ಕುಡ್ಲೆ ಕಡಲ ತೀರದ ಜಟಾಯುತೀರ್ಥದ ಬಳಿ ಗುರುವಾರ ಸಂಜೆ ಈ ಘಟನೆ ನಡೆಡಿದೆ. ತಮಿಳುನಾಡು ತಿರುಚಿಯ ಎಸ್.ಆರ್.ಎಂ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿ ಕನ್ನಿಮೋಳಿ ಈಶ್ವರನ್(23) ಮತ್ತು ಹಿಂದುಜಾ ನಟರಾಜನ್ (23) ಮೃತ ದುರ್ದೈವಿಗಳಾಗಿದ್ದು ಎಂ.ಬಿ.ಬಿ.ಎಸ್ ಅಂತಿಮ ವರ್ಷದ ವಿದ್ಯಾರ್ಥಿಗಳಾಗಿದ್ದರು.

ತಮಿಳುನಾಡು ತಿರುಚಿಯ ಎಸ್.ಆರ್.ಎಂ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಅಂತಿಮ ಪರೀಕ್ಷೆ ಬರೆದು ರಜೆಯ ಮೇಲೆ ತೆರಳಿದ್ದ 23 ಜನ ವಿದ್ಯಾರ್ಥಿನಿಯರ ತಂಡ ಚೆನ್ನೈ ನ ವ್ರೆಟಿ ಟ್ರಾವೆಲ್ಸ್ ಮೂಲಕ ಧಾಂಡೇಲಿ, ಗೋಕರ್ಣ, ಮುರ್ಡೇಶ್ವರ ಪ್ರವಾಸಕ್ಕೆ ಆಗಮಿಸಿದ್ದು ದಾಂಡೇಲಿಯಿಂದ ಅಂಕೋಲಾ ತಲುಪಿ ವಿಭೂತಿ ಪಾಲ್ಸ್ ಗೆ ಹೋಗಿ ಸಂಜೆ ಗೋಕರ್ಣ ತಲುಪಿದ್ದರು. ಗೋಕರ್ಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದೆ.

ಇನ್ನು ವಿದ್ಯಾರ್ಥಿನಿಯರ ಜೊತೆಗೆ ಬಂದಿದ್ದ ಟ್ರಾವಲ್ ಸಂಸ್ಥೆಯ ಗೈಡ್ ಗಾಂಧಿ ಶಿವಕುಮಾರನ್ ಎನ್ನುವವರು ಸೂರ್ಯಾಸ್ತ ತೋರಿಸುವುದಾಗಿ ಹೇಳಿ ಕುಡ್ಲೆ ಕಡಲ ತೀರದ ಜಟಾಯು ತೀರ್ಥ ಪ್ರದೇಶಕ್ಕೆ ತೆರಳಿದ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಅಲೆಗಳ ಹೊಡೆತಕ್ಕೆ ಸಮುದ್ರಪಾಲಾಗಿದ್ದಾರೆ. ಸ್ಥಳೀಯ ಮಣಿರಾಜು ಎನ್ನುವವರು ರಕ್ಷಣೆಗೆ ದಾವಿಸಿ ಸಮುದ್ರಕ್ಕೆ ಜಿಗಿದಿದ್ದು ಅಲೆಗಳ ತೀವ್ರತೆ ಹೆಚ್ಚಿದ ಕಾರಣ ಅವರು ಸಹ ಅಪಾಯಕ್ಕೆ ಸಿಲುಕಿದ್ದು ಕುಡ್ಲೆ ಬೀಚ್ ಬೋಟ್ ಮೂಲಕ ಸಾಗಿ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Comments are closed.