Madikeri: ಮಡಿಕೇರಿ: ಎಸ್.ಡಿ.ಪಿ.ಐ. ವತಿಯಿಂದ ಮೊಂಬತ್ತಿ ಬೆಳಗಿಸಿ ಶ್ರದ್ಧಾಂಜಲಿ!

Madikeri: ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದಿರುವ ಮಾನವೀಯತೆಯ ಮೇಲಿನ ಉಗ್ರರ ದಾಳಿಯನ್ನು ಖಂಡಿಸಿ ಎಸ್.ಡಿ.ಪಿ.ಐ. ವತಿಯಿಂದ ಮಡಿಕೇರಿಯಲ್ಲಿ ನೆನ್ನೆ ರಾತ್ರಿ ಮೊಂಬತ್ತಿ ಬೆಳಗಿಸಿ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮಡಿಕೇರಿ ಮಾರುಕಟ್ಟೆ ಬಳಿ ಎಸ್.ಡಿ.ಪಿ.ಐ. ಕಾರ್ಯಕರ್ತರು ಮೊಂಬತ್ತಿ ಬೆಳಗಿಸಿ ಪಹಲ್ಗಾಮ್ ನಲ್ಲಿ ಮಡಿದವರಿಗೆ ಸಂತಾಪ ಸೂಚಿಸಿದರು.
ಈ ಸಂದರ್ಭ ಮಾತನಾಡಿದ ಎಸ್.ಡಿ.ಪಿ.ಐ. ಜಿಲ್ಲಾಧ್ಯಕ್ಷರಾದ ಅಮೀನ್ ಮೊಯ್ಸಿನ್ ಅವರು, ಕೇಂದ್ರ ಸರಕಾರ ಯೋಧರ ಕೊರತೆಯನ್ನು ನೀಗಿಸಲು ಕಾರ್ಯ ಪ್ರವೃತ್ತರಾಗುವಂತೆ ಒತ್ತಾಯಿಸಿದರು.
ಭಾವೈಕ್ಯತೆ ಪರಂಪರೆ ಹೊಂದಿರುವ ಸುಭದ್ರ ಭಾರತದಲ್ಲಿ ಅಸುರಕ್ಷತೆಯನ್ನು ಸೃಷ್ಟಿಸುವ ಸಂಚು ನಡೆಯುತ್ತಿದೆ. ಭಯೋತ್ಪಾದನೆಗೆ ಧರ್ಮ, ಜಾತಿ ಇಲ್ಲ. ಭಯೋತ್ಪಾದನೆಯೇ ಪ್ರತ್ಯೇಕ ಧರ್ಮವಾಗಿದೆ ಎಂದು ಅಮೀನ್ ಮೊಯ್ಸಿನ್ ಅವರು ಅಭಿಪ್ರಾಯ ಪಟ್ಟರು.
Comments are closed.