CET: ಜನಿವಾರ ಪ್ರಕರಣ; ಪರೀಕ್ಷೆ ವಂಚಿತ ಅಭ್ಯರ್ಥಿಗೆ ಎರಡು ಆಯ್ಕೆ!

Share the Article

CET: ಜನಿವಾರ ಪ್ರಕರಣದಿಂದ CET ಪರೀಕ್ಷೆ ವಂಚಿತನಾದ ಅಭ್ಯರ್ಥಿಗೆ ಎರಡು ಆಯ್ಕೆ ನೀಡಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಸುಚಿದ್ರಲ್ ಕುಲಕರ್ಣಿಗೆ ಬೀದರ್‌ನಲ್ಲಿ ಜನಿವಾರ ಹಾಕಿದ ಹಿನ್ನೆಲೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡದೇ ಇದ್ದುದರಿಂದ ಒಂದು ವಿಷಯದ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ನೀಡುವುದು ಅಥವಾ ಹಾಲಿ ಬರೆದಿರುವ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದ ಪರೀಕ್ಷೆಯಲ್ಲಿ ತೆಗೆಯುವ ಅಂಕದ ಆಧಾರದ ಮೇಲೆ ನೀಡುವ ಗಣಿತ ವಿಷಯದ ಅಂಕ ನಿಗದಿ ಮಾಡುವ ಆಯ್ಕೆ ನೀಡಲು ಉನ್ನತ ಶಿಕ್ಷಣ ಇಲಾಖೆ ತೀರ್ಮಾನಿಸಿದೆ.

ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್, “ಪರೀಕ್ಷೆ ವಿಚಾರವಾಗಿ ನಿರ್ಧಾರ ತೆಗೆದುಕೊಳ್ಳಲು ರಚಿಸಿದ್ದ ಸಮಿತಿಯು ವರದಿ ನೀಡಿದೆ. ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದ ಅಂಕಗಳನ್ನು ಆಧರಿಸಿ ರ್ಯಾಂಕ್ ನೀಡಲು ಶಿಫಾರಸು ಮಾಡಿದೆ. ಆದರೆ, ಅನವಶ್ಯಕ ವಿವಾದ ಸೃಷ್ಟಿಸುವ ಬದಲಾಗಿ ವಿದ್ಯಾರ್ಥಿಗೆ ಪರೀಕ್ಷೆಯ ಆಯ್ಕೆ ನೀಡಲಾಗಿದೆ. ಈ ಎರಡು ಆಯ್ಕೆಗಳಲ್ಲಿ ಒಂದನ್ನು ವಿದ್ಯಾರ್ಥಿ ಸ್ವೀಕರಿಸಿದ ಮೇಲೆ ರ್ಯಾಂಕ್ ನೀಡಲಾಗುತ್ತದೆ” ಎಂದು ತಿಳಿಸಿದ್ದಾರೆ.

ಸಿಇಟಿ ಫಲಿತಾಂಶ ನೀಡಲು ಇನ್ನೂ ಸಾಕಷ್ಟು ಸಮಯವಿದ್ದು, ರ್ಯಾಂಕ್‌ಗೆ ಸಿಇಟಿನಲ್ಲಿ ಪಡೆದ ಅಂಕಗಳಲ್ಲಿ ಶೇ.50 ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಯಲ್ಲಿ ಪಡೆದ ಶೇ.50ರಷ್ಟು ಅಂಕಗಳನ್ನು ಸಮೀಕರಿಸಿ ರ್ಯಾಂಕ್ ಪಟ್ಟಿ ನೀಡಲಿದೆ.

Comments are closed.