Bantwal: ಮಗುವಿನ ಟಿಕೆಟ್ ವಿಚಾರದಲ್ಲಿ ತಗಾದೆ; ನಿರ್ವಾಹಕನಿಂದ ಮಹಿಳೆ ಮೇಲೆ ಹಲ್ಲೆ!

Bantwala: ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ಬಸ್ಸಿನಲ್ಲಿ ಗುರುವಾರ ರಾತ್ರಿ ಮಗುವೊಂದಕ್ಕೆ ಟಿಕೆಟ್ ತೆಗೆದುಕೊಳ್ಳುವ ವಿಚಾರದಲ್ಲಿ ನಿರ್ವಾಹಕ ಟಿಕೆಟ್ ಯಂತ್ರದಲ್ಲಿ ಮಹಿಳೆಗೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ವಾಗ್ವಾದ ನಡೆದು ನಂತರ ಬಿ.ಸಿ.ರೋಡಿನಲ್ಲಿ ಪೊಲೀಸರು ಮಾತುಕತೆ ಮಾಡಿ ಬಸ್ಸನ್ನು ಕಳುಹಿಸಿಕೊಟ್ಟ ಘಟನೆ ನಡೆದಿದೆ.
ಬಸ್ಸನ್ನು ನಿಲ್ಲಿಸಿ ಪೊಲೀಸರಿಗೆ ದೂರನ್ನು ನೀಡುತ್ತೇನೆ ಎಂದು ಮಹಿಳೆ ಆಗ್ರಹಿಸಿದಾಗ ಚಾಲಕ ಬಸ್ಸನ್ನು ನಿಲ್ಲಿಸಲಿಲ್ಲ. ನಂತರ ಬಸ್ಸಿನಲ್ಲಿದ್ದ ಪ್ರಯಾಣಿಕರೊಬ್ಬರು ಬಂಟ್ವಾಳ ನಗರ ಪೊಲೀಸರಿಗೆ ಮಾಹಿತಿ ನೀಡಿದರು.
ಬಂಟ್ವಾಳ ನಗರ ಠಾಣಾ ಪಿಎಸ್‌ಐ ರಾಮಕೃಷ್ಣ ಹಾಗೂ ಸಿಬ್ಬಂದಿ ಬಸ್ಸನ್ನು ಬಿ.ಸಿ.ರೋಡು ನಿಲ್ದಾಣದಲ್ಲಿ ನಿಲ್ಲಿಸಿ ನಂತರ ವಿಚಾರಣೆ ಮಾಡಿದರು.
Comments are closed.