Delhi: ಪಾಕಿಸ್ತಾನಕ್ಕೆ ಮಾರಿ ಹಬ್ಬ – ಫೈಲ್ ಹಿಡಿದು ರಾಷ್ಟ್ರಪತಿ ಭೇಟಿಯಾದ ಅಮಿತ್ ಶಾ, ಜಯಶಂಕರ್

Delhi: ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಗುರುವಾರ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ಸಭೆ ನಡೆಸಿದರು.

“ಕೇಂದ್ರ ಗೃಹ ವ್ಯವಹಾರ ಮತ್ತು ಸಹಕಾರ ಸಚಿವ ಅಮಿತ್ ಶಾ ಮತ್ತು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದರು” ಎಂದು ರಾಷ್ಟ್ರಪತಿ ಕಚೇರಿ ಎಕ್ಸ್ನಲ್ಲಿ ಪೋಸ್ಟ್ನಲ್ಲಿ, ಸಭೆಯ ಚಿತ್ರದೊಂದಿಗೆ ತಿಳಿಸಿದೆ. ಈ ಬೆನ್ನಲ್ಲೇ ಇದನ್ನು ನೋಡಿದ ನೆಟ್ಟಿಗರು ಪಾಕಿಸ್ತಾನಕ್ಕೆ ಮಾರಿಹಬ್ಬ ಕಾದಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ.
Comments are closed.