New Delhi: ಗಡಿ ನುಸುಳಲು ಕಾಯುತ್ತಿರುವ 200 ಪಾಕಿಸ್ತಾನ ಉಗ್ರರು, ಗಡಿಯಲ್ಲಿ ಕಟ್ಟೆಚ್ಚರ!

New Delhi: ಪಹಲ್ಗಾಮ್ ಉಗ್ರರ ದಾಳಿ ಬೆನ್ನಲ್ಲೇ ಗಡಿನಿಯಂತ್ರಣ ರೇಖೆ ಬಳಿ ಕಾರ್ಯಾಚರಿಸುತ್ತಿರುವ ಉಗ್ರರ ಅಡಗುತಾಣಗಳ ಪತ್ತೆ ಕಾರ್ಯವನ್ನು ಭಾರತ ಚುರುಕುಗೊಳಿಸಿದ್ದು, ಈ ವೇಳೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಡಿಯಲ್ಲಿ 42 ಉಗ್ರರ ಅಡುಗು ತಾಣಗಳು ಪತ್ತೆಯಾಗಿದೆ. ಅದರಲ್ಲಿ 150-200 ತರಬೇತಿ ಪಡೆದ ಉಗ್ರರು ಭಾರತದೊಳಗೆ ಸಜ್ಜಾಗಿದ್ದಾರೆ ನುಸುಳಲು ಮಾಹಿತಿ ಹೊರಬಿದ್ದಿದೆ.
60ಕ್ಕೂ ಹೆಚ್ಚು ಉಗ್ರರು: ಹಿಜ್ಜುಲ್ ಮುಜಾಹಿದೀನ್ (ಎಚ್‌ಎಂ), ಜೈಶ್ -ಎ-ಮೊಹಮ್ಮದ್ (ಜೆಇಎಂ) ಮತ್ತು ಲಷ್ಕರ್ ಎ ತೊಯ್ದಾ(ಎಲ್‌ಇಟಿ)ಗೆ ಸೇರಿದ 60 ಉಗ್ರರು ಜಮ್ಮು ಮತ್ತು ಕಾಶ್ಮೀರದಲ್ಲಿ ಈಗಾಗಲೇ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇವರ ಜತೆಗೆ 17 ಸ್ಥಳೀಯ ಉಗ್ರರೂ ಹಿಂಸಾಚಾರಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ಮೂಲಗಳು ಹೇಳಿರುವ ಕುರಿತು ವರದಿಯಾಗಿದೆ.
Comments are closed.