Uppinangady: ಎರಡು ಮನೆಗಳಿಗೆ ನುಗ್ಗಿದ ಕಳ್ಳ; ಲಕ್ಷಾಂತರ ಬೆಲೆಬಾಳುವ ನಗ ನಗದು ಕಳವು!

Uppinangady: ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದಲ್ಲಿನ ಎರಡು ಮನೆಗಳಿಗೆ ಕನ್ನ ಹಾಕಲಾಗಿದ್ದು, ಲಕ್ಷಾಂತರ ಬೆಲೆಬಾಳುವ ನಗ ನಗದು ದೋಚಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ತೆಕ್ಕಾರು ಗ್ರಾಮದ ಗುತ್ತುಮನೆ ಮುಸ್ತಾಫ ಅವರ ಮನೆಯಲ್ಲಿ ಪತ್ನಿ ನಾದಿನಿ ಮಲಗಿದ್ದ ಸಮಯದಲ್ಲಿ ಒಳ ನುಗ್ಗಿರುವ ಕಳ್ಳ 12 ಗ್ರಾಂ ತೂಕವಿರು 3 ಉಂಗುರು, 6 ಗ್ರಾಂ ತೂಕವಿರುವ 4 ಉಂಗುರ, 3 ಸಾವಿರ ನಗದನ್ನು ದೋಚಿದ್ದಾರೆ. ಕೋಡಿ ಮನೆ ನಿವಾಸಿ ಅನ್ವರ್ ಅವರ ಮನೆ ಮಂದಿ ಮಲಗಿದ್ದಾಗಲೇ ಕಳ್ಳ ನುಗ್ಗಿದ್ದು, ಕಪಾಟನ್ನು ಜಾಲಾಡಿ ನಗದನ್ನು ತುಂಬಿಸುವ ಭರದಲ್ಲಿ ಅಲ್ಲೇ ಕೆಳಕ್ಕೆ ಬೀಳಿಸಿದ್ದನೆನ್ನಲಾಗಿದೆ. ಮನೆಯ ಯಜಮಾನಿ ಎದ್ದಾಗ ಕಳ್ಳ ಓಡಿ ಹೋಗಿದ್ದ ಎಂದು ವರದಿಯಾಗಿದೆ.
ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಸಿ ತನಿಖೆ ಮಾಡುತ್ತಿದ್ದಾರೆ.
Comments are closed.