Pahalgam Terror Attack: ಪಹಲ್ಗಾಮದಲ್ಲಿ ಉಗ್ರರ ದಾಳಿ; ತಿರುಪತಿಯಲ್ಲಿ ಹೈ ಅಲರ್ಟ್‌!

Share the Article

Pahalgam Terror Attack: ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಹಿನ್ನೆಲೆ ದೇಶದ ಹಲವು ಪ್ರವಾಸಿ ತಾಣಗಳ ಚೆಕಿಂಗ್‌ ಹಾಗೂ ಭದ್ರತೆಯನ್ನು ಹೆಚ್ಚಳ ಮಾಡಲಾಗಿದೆ.

ಪ್ರತಿ ದಿನ ಲಕ್ಷ ಲಕ್ಷ ಹಿಂದೂ ಭಕ್ತರು ಭೇಟಿ ನೀಡುವ ತಿರುಮಲಕ್ಕೆ ಬಿಗಿ ಭದ್ರತೆ ಮಾಡಲಾಗಿದೆ. ಉಗ್ರರು ಆಂಧ್ರಪ್ರದೇಶದ ಇಬ್ಬರು ಪ್ರವಾಸಿಗರನ್ನು ಪಹಲ್ಗಾಮ್‌ನಲ್ಲಿ ಹತ್ಯೆ ಮಾಡಿದ್ದಾರೆ. ಈ ಕಾರಣದಿಂದ ತಿರುಪತಿ ಬೆಟ್ಟದಾದ್ಯಂತ ಹೈ ಅಲರ್ಟ್‌ ಘೋಷಣೆ ಮಾಡಲಾಗಿದೆ. ತಿರುಪತಿಗೆ ಬರುವ ಎಲ್ಲಾ ವಾಹನಗಳು, ಲಗೇಜ್‌ ಬ್ಯಾಗ್‌ಗಳನ್ನು ತೀವ್ರ ತಪಾಸಣೆ ಮಾಡಲಾಗುತ್ತಿದ್ದು ಹೆಚ್ಚಿನ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

ಟೋಲ್‌ಗೇಟ್‌ಗಳಲ್ಲೇ APSRTC ಬಸ್‌, ಖಾಸಗಿ ವಾಹನ ಸೇರಿ ಪ್ರತಿಯೊಂದು ವಾಹನಗಳ ಕಟ್ಟುನಿಟ್ಟಿನ ತಪಾಸಣೆ ಮಾಡಲಾಗುತ್ತಿದೆ.

Comments are closed.