Terror Attack: ಉಗ್ರರ ದಾಳಿ ವೇಳೆ ಮುಸ್ಲಿಂ ಧರ್ಮದ ‘ಕಲ್ಮಾ’ ಪಠಿಸಿ ಜೀವ ಉಳಿಸಿಕೊಂಡ ಹಿಂದೂ ಪ್ರಾಧ್ಯಾಪಕ !!

Share the Article

Terror Attack : ಕಾಶ್ಮೀರದ ಪಹಲ್ಗಾಮ್‌ ನಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಮನಬಂದಂತೆ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪ್ರವಾಸಕ್ಕೆಂದು ಆಗಮಿಸಿದ್ದ ಜನರು ಉಗ್ರರ ಗುಂಡೇಟಿಗೆ ಬಲಿಯಾಗಿದ್ದಾರೆ. ಈ ದಾಳಿಗೆ ರಾಜ್ಯದ ಮೂವರು ಸೇರಿ ಒಟ್ಟು 28 ಮಂದಿ ಬಲಿಯಾಗಿದ್ದಾರೆ. ಉಗ್ರರು ಜನರ ಧರ್ಮವನ್ನು ಕೇಳಿ ಕೇಳಿ ಅವರಿಗೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಹಿಂದೂ ಪ್ರಾಧ್ಯಾಪಕರು ಒಬ್ಬರು ಮುಸ್ಲಿಮಂತ್ರವನ್ನು ಪಠಿಸುವ ಮೂಲಕ ತಮ್ಮ ಜೀವವನ್ನು ಉಳಿಸಿಕೊಂಡಿದ್ದಾರೆ.

ಹೌದು, ದಾಳಿಕೋರರು ಮೊದಲು ತಾವು ಹಿಂದೂನಾ ಅಥವಾ ಮುಸ್ಲಿಮಾ ಎಂಬುದನ್ನು ಕೇಳಿ, ಹಿಂದೂ ಧರ್ಮದವರನ್ನು ಗುರುತಿಸಿದ ನಂತರ ಅವರನ್ನು ಹತ್ಯೆಗೈ ಯುತ್ತಿದ್ದರು ಎನ್ನಲಾಗಿದೆ. ಈ ಭಯಾನಕ ಘಟನೆಯೊಂದರಲ್ಲಿ ಅಸ್ಸಾಂ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ದೇಬಾಶಿಶ್ ಭಟ್ಟಾಚಾರ್ಯ ಅವರು ಆಶ್ಚರ್ಯಕರ ರೀತಿಯಲ್ಲಿ ಬದುಕುಳಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ದೇಬಾಶಿಶ್ ಅವರು ಹೇಳುವ ಪ್ರಕಾರ, ಅವರು ಆಗ ಒಂದು ಮರದ ಕೆಳಗೆ ಮಲಗಿದ್ದರು. ಅವರ ಸುತ್ತಲೂ ಇದ್ದ ಎಲ್ಲರೂ ಕಲ್ಮಾ ಪಠಿಸುತ್ತಿದ್ದರು. ಆತಂಕದಿಂದ ತಾವೂ ಸಹ ಅದನ್ನು ಪಠಿಸಲು ಪ್ರಾರಂಭಿಸಿದರು. ಕೆಲವೇ ಕ್ಷಣಗಳಲ್ಲಿ ಉಗ್ರರು ಆ ಪ್ರದೇಶಕ್ಕೆ ಆಗಮಿಸಿದರು. ಅವರಲ್ಲಿ ಒಬ್ಬ ಹಿಂದೂ ವ್ಯಕ್ತಿ ಎಂದು ಸಂದೇಹವಿದ್ದು, ಅವನನ್ನು ಸ್ಥಳದಲ್ಲಿಯೇ ಗುಂಡು ಹೊಡೆದು ಕೊಲ್ಲಲಾಯಿತು. ಅದನ್ನು ಕಂಡ ತಕ್ಷಣ ನಾನು ಭಯದಿಂದ ನಡುಗಿದೆ.

‘ನಾನು ಅದೆಷ್ಟೋ ಭಯದಿಂದ ಕಲ್ಮಾ ಪಠಿಸುತ್ತಿದ್ದೆ. ಆ ಉಗ್ರ ನನ್ನ ಬಳಿಗೆ ಬಂದು ‘ನೀನು ಏನು ಮಾಡುತ್ತಿದ್ದೀಯ?’ ಎಂದು ಪ್ರಶ್ನಿಸಿದ. ನಾನು ಇನ್ನಷ್ಟು ಧ್ವನಿಯಲ್ಲಿ ಪಠನ ಮುಂದುವರೆಸಿದೆ. ಆಗ ಅವನು ನನಗೆ ಏನೂ ಮಾಡದೆ ಅಲ್ಲಿಂದ ಹೊರಟುಹೋದ,’ ಎಂದು ಅವರು ತಮ್ಮ ಅನುಭವವನ್ನು ವಿವರಿಸಿದ್ದಾರೆ.

Comments are closed.