Madikeri: ಕುಡಿದು ಸಾರ್ವಜನಿಕ ಸ್ಥಳದಲ್ಲಿ ಗಲಾಟೆ; ಹೀಗೂ ಶಿಕ್ಷೆ ನೀಡುತ್ತೆ ಕೋರ್ಟ್‌!

Share the Article

Madikeri: ಕೊಡಗು ಜಿಲ್ಲೆ ಸೋಮವಾರಪೇಟೆಯಲ್ಲಿ ಮದ್ಯ ಸೇವಿಸಿ ಸಾರ್ವಜನಿಕವಾಗಿ ಗಲಾಟೆ ಮಾಡಿ ಶಾಂತಿ ಕದಡಿದ ಆರೋಪದಲ್ಲಿ ಮೂವರು ಆರೋಪಿಗಳಿಗೆ ಸರಕಾರಿ ಆಸ್ಪತ್ರೆಯಲ್ಲಿ ಒಂದು ದಿನ ಸ್ವಚ್ಛತಾ ಕೆಲಸ ಮತ್ತು ಒಂದು ಸಾವಿರ ರೂಪಾಯಿ ದಂಡ ವಿಧಿಸಿ ಸೋಮವಾರಪೇಟೆ ಹಿರಿಯ ಸಿವಿಲ್‌ ನ್ಯಾಯಾಲಯ ಆದೇಶ ನೀಡಿದೆ.

ಆರೋಪಿಗಳಾದ ಸೋಮವಾರಪೇಟೆಯ ದೀಪಕ್‌, ಕೌಶಿಕ್‌, ಕಾರ್ತಿಕ್‌ ಮದ್ಯಪಾನ ಮಾಡಿ ಗಲಾಟೆ ಮಾಡುತ್ತಿದ್ದರು. ಪೊಲೀಸರು ಇವರನ್ನು ಬಂಧನ ಮಾಡಿ ಕೋರ್ಟ್‌ಗೆ ಹಾಜರು ಪಡಿಸಿದ್ದರು. ನಂತರ ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಬಿಎನ್‌ಎಸ್‌ 275 ರಂತೆ ಪ್ರಧಾನ ಸಿವಿಲ್‌ ನ್ಯಾಯಾಧೀಶರಾದ ಗೋಪಾಲಕೃಷ್ಣ ಅವರು ಶಿಕ್ಷೆಯನ್ನು ಬುಧವಾರ ಪ್ರಕಟ ಮಾಡಿದ್ದಾರೆ.

ಆರೋಪಿಗಳು ಸರಕಾರಿ ಆಸ್ಪತ್ರೆಯಲ್ಲಿ ಸ್ವಚ್ಛತಾ ಕೆಲಸ ಮಾಡಿದ್ದಾರೆ.

Comments are closed.