Zilla Panchayat Elections: ಜಿ.ಪಂ, ತಾ.ಪಂ ಚುನಾವಣೆ ಇನ್ನು 3 ತಿಂಗಳಲ್ಲಿ!

Share the Article

Zilla Panchayat Elections: ಸಚಿವ ಡಾ.ಶರಣ್‌ ಪ್ರಕಾಶ್‌ ಪಾಟೀಲ್‌ ಅವರು ಇನ್ನು ಮೂರು ತಿಂಗಳಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಹಿಂದಿನ ಬಿಜೆಪಿ ಸರಕಾರ ಕೇಂದ್ರೀಕೃತ ಅಧಿಕಾರದ ಪರವಾಗಿದ್ದರಿಂದ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲಿಲ್ಲ. ಬಿಜೆಪಿಯವರು ಸೃಷ್ಟಿಸಿದ ಗೊಂದಲ ನಿವಾರಣೆ ಮಾಡುವುದಕ್ಕಾಗಿಯೇ ಚುನಾವಣೆ ವಿಳಂಬಗೊಂಡಿದ್ದು, ಈಗ ಚುನಾವಣೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಮೂರು ತಿಂಗಳಲ್ಲಿ, ಎಂಟು ತಿಂಗಳ ಬಳಿಕ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲಾಗುವುದು ಎಂದು ಸುದ್ದಿಗಾರರ ಜೊತೆ ಹೇಳಿದ್ದಾರೆ.

Comments are closed.