Vitla: ಅರಮನೆ ರಸ್ತೆಯ ಎರಡು ಅಂಗಡಿಗಳಿಗೆ ಬೆಂಕಿ!

Share the Article

Vitla: ಅರಮನೆ ರಸ್ತೆಯ ರಸ್ಕಿನ್‌ ಕಾಂಪ್ಲೆಕ್ಸ್‌ನಲ್ಲಿ ಎರಡು ಅಂಗಡಿಗಳು ಬೆಂಕಿಗಾಹುತಿಯಾದ ಘಟನೆ ವಿಟ್ಲದಲ್ಲಿ ನಡೆದಿರುವ ಕುರಿತು ವರದಿಯಾಗಿದೆ.

ಕೂಡಲೇ ಘಟನಾ ಸ್ಥಳಕ್ಕೆ ಬಂದ ಮುರಳೀಧರ್‌ ನೇತೃತ್ವದ ಫ್ರೆಂಡ್ಸ್‌ ವಿಟ್ಲ ತಂಡದ ಸದಸ್ಯರು ಪಿಕಪ್‌ ವಾಹನದಲ್ಲಿ ನೀರು ತಂದು ಬೆಂಕಿ ನಂದಿಸುವ ಯತ್ನ ಮಾಡಿದ್ದಾರೆ. ಪುತ್ತೂರು ವಿಭಾಗದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಘಟನೆ ನಡೆದ ಸ್ಥಳಕ್ಕೆ ಬಂದಿದ್ದು, ಬೆಂಕಿಯನ್ನು ಸಂಪೂರ್ಣ ನಂದಿಸಿದರು.

ಅಡಿಕೆ ಕರಿಮೆಣಸು ಅಂಗಡಿಗಳಲ್ಲಿ ಇದ್ದಿದ್ದು ಸುಟ್ಟು ಕರಕಲಾಗಿರುವ ಕುರಿತು ವರದಿಯಾಗಿದೆ.

Comments are closed.