Mangaluru: ಕಸ ಪ್ರತ್ಯೇಕ ಮಾಡದವರಿಗೆ ಪಾಲಿಕೆಯಿಂದ ಭರ್ಜರಿ ದಂಡ ಪ್ರಯೋಗ!

Mangaluru: ಮಂಗಳೂರು ನಗರ ವ್ಯಾಪ್ತಿಯಲ್ಲಿ ಹಸಿಕಸ, ಒಣ ಕಸ ಮತ್ತು ಸ್ಯಾನಿಟರಿ ಪ್ಯಾಡ್‌ಗಳನ್ನು ವಿಂಗಡಿಸದೇ ನೀಡುವವರಿಗೆ ದಂಡ ಪ್ರಯೋಗ ಮುಂದುವರೆದಿದೆ.
ಇಂದು (ಎ.23) ಕೊಟ್ಟಾರ, ಉರ್ವಾಸ್ಟೋರ್‌ಗಳಲಿ ದಾಳಿ ಮಾಡಿರುವ ಅಧಿಕಾರಿಗಳು ಹೋಟೆಲ್‌ಗಳು, ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ತಲಾ ರೂ.5000 ದಂಡ ವಿಧಿಸಿದ್ದಾರೆ.
ಎಚ್ಚರಿಕೆಯಾಗಿ ಮೊದಲಿಗೆ ರೂ.5000 ನಂತರ ರೂ.25000 ರೂ. ಅದರ ನಂತರ ಕೂಡಾ ತ್ಯಾಜ್ಯ ವಿಂಗಡನೆಗೆ ಕ್ರಮ ವಹಿಸದಿದ್ದರೆ, ಪರವಾನಿಗೆ ರದ್ದುಗೊಳಿಸುವ ಎಚ್ಚರಿಕೆಯನ್ನು ಪಾಲಿಕೆ ಅಧಿಕಾರಿಗಳು ನೀಡಿದ್ದಾರೆ.
Comments are closed.