PM Modi: ಪಹಲ್ಗಾಮ್‌ ಉಗ್ರ ದಾಳಿ- ಸೌದಿ ಪ್ರವಾಸ ತೊರೆದು ರಾತ್ರಿಯೇ ಪ್ರಧಾನಿ ಮೋದಿ ಭಾರತಕ್ಕೆ ವಾಪಸ್‌!

Share the Article

PM Modi: ಕಾಶ್ಮೀರದ ಪಹಲ್ಗಾಮ್‌ ನಲ್ಲಿ ನಡೆದ ಉಗ್ರ ದಾಳಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸೌದಿ ಅರೇಬಿಯಾದ ಅಧಿಕೃತ ಭೇಟಿಯನ್ನು ಅರ್ಧಕ್ಕೆ ಮೊಟಕುಗೊಳಿಸಿ, ತಕ್ಷಣವೇ ಭಾರತಕ್ಕೆ ಮರಳಿದ್ದಾರೆ.

ಹೌದು, ಆರು ವರ್ಷಗಳ ಬಳಿಕ ಸೌದಿ ಅರೇಬಿಯಾ ಪ್ರವಾಸ ಕೈಗೊಂಡಿರುವ ಮೋದಿ ಅವರು ದೇಶದಲ್ಲಿ ಉಗ್ರರ ದಾಳಿಯ ಅಟ್ಟಹಾಸ ಕಂಡು ಸೌದಿ ಪ್ರವಾಸವನ್ನು ಮುಟಕುಗೊಳಿಸಿ ರಾತ್ರಿಯೇ ಭಾರತಕ್ಕೆ ವಾಪಸ್ ಆಗಿದ್ದಾರೆ. ಸೌದಿ ಅರೇಬಿಯಾದಲ್ಲಿ ಆಯೋಜಿಸಲಾಗಿದ್ದ ಉನ್ನತ ಮಟ್ಟದ ಭೋಜನಕೂಟವನ್ನು ಅವರು ತಪ್ಪಿಸಿದ್ದಾರೆ.

ಅಂದಹಾಗೆ ಪ್ರಧಾನಿ ಮೋದಿ ಅವರು ತಮ್ಮ ಎರಡು ದಿನಗಳ ಭೇಟಿಯನ್ನು ಪೂರ್ಣಗೊಳಿಸಿ, ಇಂದು ರಾತ್ರಿ ಅಂದರೆ ಏಪ್ರಿಲ್ 23ರಂದು ಭಾರತಕ್ಕೆ ಮರಳಬೇಕಿತ್ತು. ಆದರೆ, ಕಾಶ್ಮೀರದಲ್ಲಿ ಭಯೋತ್ಪಾದಕರು ಪ್ರವಾಸಿಗರ ಮೇಲೆ ಅಟ್ಟಹಾಸ ಮೆರೆದಿರುವ ಹಿನ್ನೆಲೆ ಇದನ್ನು ಗಂಭೀರವಾಗಿ ಪರಿಗಣಿಸಿ ಅವರು ತಮ್ಮ ಎಲ್ಲ ಯೋಜನೆಯನ್ನು ಬದಲಾಯಿ ನಿನ್ನಿಯೇ ಭಾರತಕ್ಕೆ ಹಿಂತಿರುಗಿಸಲು ನಿರ್ಧರಿಸಿದ್ದಾರೆ.

Comments are closed.