Terror Attack : ಪಹಲ್ಗಾಮ್ ಉಗ್ರರ ದಾಳಿ- ಮೃತಪಟ್ಟವರ ಹಾಗೂ ಗಾಯಗೊಂಡವರ ಪಟ್ಟಿ ರಿಲೀಸ್

Terror Attack : ಪುಲ್ವಾಮಾ ಅಟ್ಯಾಕ್ ಮಾತು ಮುನ್ನವೇ ಕಾಶ್ಮೀರದಲ್ಲಿ ಪಹಲ್ಗಾಮ್ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಮನಬಂದಂತೆ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪ್ರವಾಸಕ್ಕೆಂದು ಆಗಮಿಸಿದ್ದ ಜನರು ಉಗ್ರರ ಗುಂಡೇಟಿಗೆ ಬಲಿಯಾಗಿದ್ದಾರೆ.
पहलगाम में हुए आतंकी हमले में 16 लोगों की मौत की सूची जारी कर दी गई है। 10 घायल के भी नाम…#PahalgamAttack #Pahalgam #JammuKashmir #TerriostAttack #PahalgamTerroristAttack pic.twitter.com/0U1AydepwS
— Sumit Kumar (@skphotography68) April 22, 2025
ಈ ದಾಳಿಯಲ್ಲಿ ರಾಜ್ಯದ ಮೂವರು ಬಲಿಯಾಗಿದ್ದು, ಶಿವಮೊಗ್ಗದ ಉದ್ಯಮಿ ಮಂಜುನಾಥ್ ಹಾಗೂ ಹಾವೇರಿಯ ಭರತ್ ಭೂಷಣ್ ಎಂದು ತಿಳಿದುಬಂದಿದೆ. ತಮ್ಮ ಕುಟುಂಬದ ಸದಸ್ಯರನ್ನು ತಮ್ಮ ಕಣ್ಣೆದುರೇ ಕಳೆದುಕೊಂಡವರ ಸಂಕಟ ಹೇಳತೀರಲಾಗಿದ್ದು, ಘಟನೆಯಲ್ಲಿ ಕೆಲವರು ಗಾಯಕ್ಕೊಳಗಾಗಿದ್ದಾರೆ. ಸದ್ಯ ಸ್ಥಳಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಿ ತುರ್ತು ಸಭೆ ನಡೆಸಿದ್ದಾರೆ.
ಇನ್ನು ಘಟನೆಯಲ್ಲಿ ಒಟ್ಟು 16 ಮಂದಿ ಮೃತಪಟ್ಟಿದ್ದು, 10 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕೃತ ಮಾಹಿತಿ ಹೊರಬಿದ್ದಿದೆ. ಮೃತಪಟ್ಟವರು ಯಾರು, ಯಾವ ಊರಿನವರು ಎಂಬ ಮಾಹಿತಿಯನ್ನು ಮುಂದಿನ ಟ್ವೀಟ್‌ನಲ್ಲಿ ಕಾಣಬಹುದಾಗಿದೆ.
Comments are closed.