Pahalgam Attack: ಜಮ್ಮು-ಕಾಶ್ಮೀರಕ್ಕೆ ತೆರಳಿರುವವರ ಮಾಹಿತಿಗಾಗಿ ಹೆಲ್ಪ್‌ಲೈನ್ ನಂಬರ್ ಬಿಡುಗಡೆ ಮಾಡಿದ ಸರಕಾರ!

Pahalgam Attack: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯನ್ನು ಇಬ್ಬರು ಕನ್ನಡಿಗರು ಹತ್ಯೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರವಾಸಕ್ಕೆ ತೆರಳಿರುವ ಕನ್ನಡಿಗರನ್ನು ವಾಪಸ್ ಕರೆತರಲು ರಾಜ್ಯ ಸರಕಾರ ಪ್ರಯತ್ನ ಪಡುತ್ತಿದೆ. ಪ್ರವಾಸಕ್ಕೆ ತೆರಳಿರುವವರ ಮಾಹಿತಿ ನೀಡುವಂತೆ ಪ್ರವಾಸ ನಿರ್ವಹಣೆದಾರರನ್ನು ಕೋರಿ ಸರಕಾರ ಪ್ರಕಟಣೆ ಹೊರಡಿಸಿದೆ.
ಸಂಬಂಧಿಕರು, ಸ್ನೇಹಿತರು ಪ್ರವಾಸಿಕರ ಮಾಹಿತಿಯನ್ನು ಈ ಕೆಳಕಂಡ ಹೆಲ್ಪ್‌ಲೈನ್ ಸಂಖ್ಯೆಗೆ ಕರೆ ಮಾಡಿ ತಿಳಿಸುವಂತೆ ಕೋರಲಾಗಿದೆ.
ಹೆಲ್ಪಲೈನ್ ಸಂಖ್ಯೆಗಳು
* 080-43344334
* 080-43344335
* 080-43344336
* 080-43344342
Comments are closed.