Rape: 3 ವರ್ಷದ ಮಗುವಿನ ಮೇಲೆ ಮನೆ ಮಾಲೀಕ ಸೇರಿ ಸಾಮೂಹಿಕ ಅತ್ಯಾಚಾರ!

Rape: ಮೂರು ವರ್ಷದ ಮಗುವಿನ ಮೇಲೆ ಮನೆ ಮಾಲೀಕನ ಮಗ ಸ್ನೇಹಿತನೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ.
ಚಾಕಲೇಟ್ ಕೊಡುವುದಾಗಿ ಹೇಳಿ ಕಾರಿನಲ್ಲಿ ಕರೆದೊಯ್ದು ಅತ್ಯಾಚಾರ ಮಾಡಲಾಗಿದೆ. ಮಗುವಿನ ಕುಟುಂಬ ಆರೋಪಿಯ ಮನೆಯ ಬಾಡಿಗೆಗಿತ್ತು.
ಅತ್ಯಾಚಾರ ಮಾಡಿದ ಬಳಿಕ ಮನೆಯಲ್ಲಿ ಯಾರಿಗೂ ಏನೂ ಹೇಳಬೇಡ ಎಂದು ಹೇಳಿ ಮನೆಯ ಬಳಿ ಬಿಟ್ಟು ಹೋಗಿದ್ದು, ಆದರೆ ಮಗು ತಾಯಿಯ ಬಳಿ ಎಲ್ಲಾ ಹೇಳಿದೆ. ಪೋಷಕರು ಕೂಡಲೇ ದಾಬ್ರಾ ನಗರ ಪೊಲೀಸ್ ಠಾಣೆಗೆ ಹೋಗಿದ್ದು, ಪ್ರಕರಣವನ್ನು ದಾಖಲು ಮಾಡಿದ್ದು, ಇಬ್ಬರು ಆರೋಪಿಗಳನ್ನು ಬಂಧನ ಮಾಡಿದ್ದಾರೆ.
Comments are closed.