Bengaluru : ಯೋಧನ ಮೇಲೆ ಹಲ್ಲೆ ಕೇಸ್‌ಗೆ ಟ್ವಿಸ್ಟ್ – ಪೊಲೀಸರಿಂದ ಬಯಲಾಯಿತು ಸತ್ಯಾಂಶ!!

Bengaluru : ವಿಂಗ್ ಕಮಾಂಡರ್ ಬೋಸ್ ಹಲ್ಲೆಗೊಳಗಾಗಿ ಹಂಚಿಕೊಂಡ ವಿಡಿಯೊ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತು. ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಅವರ ಮೇಲೆ ಬೈಕ್‌ನಲ್ಲಿ ಬಂದ ಯುವಕರು ಹಲ್ಲೆ ಮಾಡಿದರು ಎಂದು ಸ್ವತಹ ಬೋಸ್ ಅವರು ವಿಡಿಯೋ ಮಾಡಿ ಹಂಚಿಕೊಂಡಿದ್ದರು. ಈ ಬೆನ್ನಲ್ಲೇ ಬಾರಿ ಆಕ್ರೋಶ ಕೇಳಿಬಂದಿತ್ತು. ಆದರೆ ಈಗ ಈ ಕೇಸಿಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಪೊಲೀಸರಿಂದ ನಿಜಾಂಶ ಬಯಲಾಗಿದೆ.
#WATCH | Karnataka | IAF Wing Commander Shiladitya Bose and his wife Squadron Leader Madhumita Das allegedly assaulted in a road rage incident in Bengaluru | D Devaraj, DCP East Bengaluru, says, “… This is not a case related to any language or reason. This is very clear from… pic.twitter.com/gJeDZgFtcK
— ANI (@ANI) April 21, 2025
ಹೌದು, ವಿಡಿಯೋ ಮಾಡಿ ಹಂಚಿಕೊಂಡಿದ್ದ ಬೋಸ್ ಅವರು “ನಿಮ್ಮ ಕಾರ್‌ನಲ್ಲಿ ಡಿಆರ್‌ಡಿಒ ಸ್ಟಿಕ್ಕರ್ ಇದೆ ನೀವು ಡಿಆರ್‌ಡಿಒನವರಾ ಎಂದು ಪ್ರಶ್ನೆಯನ್ನು ಕೇಳಿದ್ದಾರೆ. ಹೌದು, ಎನ್ನುತ್ತಿದ್ದಂತೆ ಏಕಾಏಕಿ ತನ್ನನ್ನು ಹಾಗೂ ತನ್ನ ಪತ್ನಿಯನ್ನು ನಿಂದಿಸಲು ಆರಂಭಿಸಿದರು. ಬಳಿಕ ಓರ್ವ ಬೈಕ್ ಕೀನಿಂದ ನನ್ನ ಹಣೆಗೆ ಹೊಡೆದ, ಕಾರಿಗೆ ಕಲ್ಲು ಎತ್ತಿ ಹಾಕಲು ಯತ್ನಿಸಿದರು, ತಡೆಯಲು ಪ್ರಯತ್ನಿಸಿದಾಗ ತಲೆಯ ಹಿಂಭಾಗಕ್ಕೆ ಕಲ್ಲಿನಿಂದ ಹೊಡೆದರು ಎಂದು ಆರೋಪ ಮಾಡಿದ್ದರು. ಅಲ್ಲದೇ ವಿಡಿಯೊದಲ್ಲಿ ಕರ್ನಾಟಕದಲ್ಲಿ ಕಾನೂನು ವ್ಯವಸ್ಥೆ ಸರಿಯಿಲ್ಲ, ಯೋಧ ಎಂದರೂ ಸಹ ಹಲ್ಲೆ ಮಾಡಿದರು” ಎಂಬ ಗಂಭೀರ ಆರೋಪಗಳನ್ನು ಮಾಡಿದ್ದರು. ಇದು ದೇಶಾದ್ಯಂತ ಸದ್ದು ಮಾಡಿದ್ದು.
ಹೀಗೆ ವಿಡಿಯೊ ವೈರಲ್ ಆಗುತ್ತಿದ್ದಂತೆಯೇ ಬೈಯಪ್ಪನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತಾವು ಕಲೆಹಾಕಿದ ಮಾಹಿತಿ ಪ್ರಕಾರ ಇದು ಪೂರ್ವ ನಿಯೋಜಿತ ಹಲ್ಲೆಯಲ್ಲ, ಬದಲಾಗಿ ರಸ್ತೆ ಜಗಳ ಎಂದಿದ್ದಾರೆ. ಪೂರ್ವ ಬೆಂಗಳೂರು ವಿಭಾಗದ ಡಿಸಿಪಿ ಡಿ ದೇವರಾಜು ಅವರು ಈ ಕುರಿತು ಮಾತನಾಡಿದ್ದು ಇದು ಭಾಷೆ ವಿಚಾರವಾಗಿಯೋ ಅಥವಾ ಧರ್ಮದ ವಿಚಾರವಾಗಿಯೋ ನಡೆದ ಘಟನೆಯಲ್ಲ, ಬೆಂಗಳೂರಿನಲ್ಲಿ ದೈನಂದಿನ ನಡೆಯುವ ರೋಡ್ ರೇಜ್ ಜಗಳಗಳ ಹಾಗೆ ಇದೂ ಸಹ ಇನ್ನೊಂದು ಪ್ರಕರಣ ಎಂದಿದ್ದಾರೆ.
ಒಟ್ಟಿನಲ್ಲಿ ಪೊಲೀಸರ ತನಿಖೆಯಲ್ಲಿ ಬೋಸ್ ಹೆಣೆದ ಸುಳ್ಳಿನ ಕಥೆ ಬಯಲಾಗಿದೆ. ವಿಡಿಯೊದಲ್ಲಿ ಬೋಸ್ ಡಿಆರ್‌ಡಿಒ ಸ್ಟಿಕ್ಕರ್ ನೋಡಿ ಹಲ್ಲೆ ಮಾಡಿದ್ದರು ಎಂದಿದ್ದರು. ಆದರೆ ರಸ್ತೆ ಸಂಚಾರದ ವೇಳೆ ಆದ ಜಗಳಕ್ಕೆ ಸುಳ್ಳು ಕಥೆ ಕಟ್ಟಿ ಬೆಂಗಳೂರು ಹೆಸರನ್ನೇಕೆ ಎಳೆದುತಂದದ್ದೇಕೆ ಎಂಬ ಪ್ರಶ್ನೆ ಮೂಡಿದೆ.
Comments are closed.