Terror Attack: ಪ್ಯಾಂಟ್ ಬಿಚ್ಚಿ, ಹಿಂದೂ ಎಂದು ಕನ್ಫರ್ಮ್ ಮಾಡಿಕೊಂಡು ಗುಂಡು ಹಾರಿಸಿದ ಉಗ್ರರು!!

Terror Attack : ಪೆಹಲ್ಗಾಮ್ ನಲ್ಲಿ ನಡೆದ ಉಗ್ರ ದಾಳಿಯ ಒಂದೊಂದೇ ಕರಾಳತೆ ಬಯಲಾಗುತ್ತಿದ್ದು, ಉಗ್ರರು ಪ್ರವಾಸಿಗರನ್ನು ಹೇಗೆ ಕೊಂದರು ಎಂಬ ವಿಚಾರಗಳು ಬೆಳಕಿಗೆ ಬರುತ್ತಿವೆ. ಇದೀಗ ಉಗ್ರರು ಪ್ರವಾಸಿಗರ ಧರ್ಮ ಯಾವುದೆಂದು ಕನ್ ಫರ್ಮ್ ಮಾಡಲು ಪ್ಯಾಂಟ್ ಎಳೆದು ನೋಡಿ ಬಳಿಕ ಅವರಿಗೆ ಗುಂಡು ಹಾರಿಸಿದರು ಎಂದು ಹೇಳಲಾಗುತ್ತಿದೆ.
ಹೌದು, ಪುರುಷರನ್ನೇ ಟಾರ್ಗೆಟ್ ಮಾಡಿ ಅದರಲ್ಲೂ ಹಿಂದೂ ಧರ್ಮದವರೇ ಎಂದು ಕನ್ ಫರ್ಮ್ ಮಾಡಿಕೊಂಡೇ ಉಗ್ರರು ತೀರಾ ಹತ್ತಿರದಿಂದಲೇ ಗುಂಡು ಹಾರಿಸಿ ಕೊಂದಿದ್ದಾರೆ. ಅಲ್ಲದೆ ಎಲ್ಲರ ಧರ್ಮ ಯಾವುದು, ಹೆಸರೇನು ಎಂದು ಕೇಳಿದ ಉಗ್ರರು ಹಿಂದೂ ಎಂದು ಕನ್ ಫರ್ಮ್ ಮಾಡಲು ಪ್ಯಾಂಟ್ ಎಳೆದು ನೋಡಿದ್ದಾರೆ. ಜೊತೆಗೆ ಐಡಿ ಕಾರ್ಡ್ ಕೂಡಾ ಚೆಕ್ ಮಾಡಿದ್ದಾರೆ ಎನ್ನಲಾಗಿದೆ.
ಹಿಂದೂ ಎಂದ ಕೂಡಲೇ ಗುಂಡು ಹೊಡೆದು ಸಾಯಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
Comments are closed.