Rajasthan: ಮಹಿಳೆಯ ಕುತ್ತಿಗೆ ಸೀಳಿ, ಪಾದ ಕಡಿದು 2ಕೆಜಿ ಬೆಳ್ಳಿಗೆಜ್ಜೆ ಕಳ್ಳತನ!

Rajasthan: ಇಲ್ಲಿನ ಜಾಹಿರಾ ಎಂಬ ಗ್ರಾಮದಲ್ಲಿ ಮಹಿಳೆಯೊಬ್ಬಳನ್ನು ಬರ್ಬರವಾಗಿ ಕೊಲೆ ಮಾಡಿ, ಪಾದವನ್ನು ಕತ್ತರಿಸಿ, 2 ಕೆ.ಜಿ. ತೂಕದ ಬೆಳ್ಳಿ ಗೆಜ್ಜೆಯನ್ನು ಕದ್ದೊಯ್ದ ಭೀಕರ ಘಟನೆ ನಡೆದಿದೆ.
ಮೃತಳನ್ನು ಊರ್ಮಿಳಾ ಮೀನಾ (50) ಎಂದು ಗುರುತಿಸಲಾಗಿದೆ.
ಭಾನುವಾರ ಕಟ್ಟಿಗೆ ಕಡಿಯಲು ತೆರಳಿದ್ದಾಕೆ ಮರಳದೆ ಇದ್ದಾಗ ಗಾಬರಿಗೊಂಡ ಮನೆಯವರು ಮೀನಾಗಾಗಿ ಹುಡುಕಾಟ ನಡೆಸಿದ್ದರು. ಈ ವೇಳೆ ಆಕೆಯ ದೇಹದ ತುಂಡುಗಳು ಹೊಲದಲ್ಲಿ ಪತ್ತೆಯಾಗಿವೆ. ಆಕೆಯ ಪಾದಗಳು ಸಮೀಪದ ನೀರಿನ ಟ್ಯಾಂಕ್‌ನಲ್ಲಿ ಸಿಕ್ಕಿದ್ದು, ಕಾಲೆಜ್ಜೆಗಳು ಕಾಣೆಯಾಗಿವೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರಲಾಗಿದೆ.
Comments are closed.