Madikeri: ಮಗಳ ಸ್ನೇಹಿತೆಯನ್ನು ಮನೆಗೆ ಕರೆಸಿ ಅತ್ಯಾಚಾರ; ಕಾಮುಕ ಅರೆಸ್ಟ್

Madikeri: ಅಪ್ರಾಪ್ತ ಬಾಲಕಿ ಮೇಲೆ ವ್ಯಕ್ತಿಯೋರ್ವ ಚಾಕಲೇಟ್ ಕೊಡುವ ಆಮಿಷವೊಡ್ಡಿ ತನ್ನ ಮನೆಯಲ್ಲಿಯೇ ಅತ್ಯಾಚಾರ ಮಾಡಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಧು (45) ಬಾಲಕಿ ಮೇಲೆ ಅತ್ಯಾಚಾರ ಮಾಡಿದ ವ್ಯಕ್ತಿ.
ಸೋಮವಾರ (ನಿನ್ನೆ) ಸಂಜೆ ತನ್ನ ಮಗಳಿಂದ ಫೋನ್ ವ್ಯಕ್ತಿ ಬಾಲಕಿಯನ್ನು ಮನೆಗೆ ಕರೆಸಿಕೊಂಡಿದ್ದಾನೆ. ಬೇಸಿಗೆ ರಜೆ ಇರುವ ಕಾರಣ ಬಾಲಕಿ ಪೋಷಕರ ಬಳಿ ಸ್ನೇಹಿತರ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದಾಳೆ. ಮಧು ತನ್ನ ಮಗಳಿಗೆ ಹಾಗೂ ಆಕೆಯ ಸ್ನೇಹಿತೆಗೆ ಚಾಕೋಲೇಟ್ ಕೊಟ್ಟಿದ್ದಾನೆ. ನಂತರ ತನ್ನ ಮಗಳ ಬಳಿ ಮತ್ತಷ್ಟು ಚಾಕೊಲೇಟ್ ತರುವಂತೆ ಹೇಳಿ ಕಳಿಸಿದ್ದಾನೆ.
ಮಗಳು ಹೋದ ನಂತರ ಈತ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದಾನೆ. ನಂತರ ಬಾಲಕಿಯ ಪೋಷಕರು ತಮ್ಮ ಮಗಳನ್ನು ಕಳುಹಿಸುವಂತೆ ಹೇಳಿದ್ದಾರೆ. ಆಗ ಮಧು ನಿಮ್ಮ ಮಗಳು ಬೆಳಿಗ್ಗೆ ಬರುತ್ತಾಳೆ, ನನ್ನ ಮಗಳ ಜೊತೆ ಆಟವಾಡುತ್ತಿದ್ದಾಳೆ ಎಂದು ಹೇಳಿ ಫೋನ್ ಕಟ್ ಮಾಡಿದ್ದಾನೆ. ಬಾಲಕಿಯ ಪೋಷಕರು ಅನುಮಾನಗೊಂಡಿದ್ದು, ಮನೆಗೆ ಹೋಗಿ ವಿಚಾರ ಮಾಡುವಾಗ ಬಾಲಕಿ ತನ್ನ ಮೇಲೆ ನಡೆದ ಘಟನೆಯ ಕುರಿತು ಹೇಳಿದ್ದಾಳೆ.
ಬಾಲಕಿಯ ಪೋಷಕರು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧನ ಮಾಡಿದ್ದು, ತನಿಖೆ ನಡೆಸುತ್ತಿದ್ದಾರೆ.
Comments are closed.