Supreme Court : ಪವಿತ್ರ ಗೌಡ ದರ್ಶನ್ ಅವರ ಪತ್ನಿಯೇ? ಸುಪ್ರೀಂ ಕೋರ್ಟ್ ಪ್ರಶ್ನೆ- ಲಾಯರ್ ಬಳಸಿದ ಆ ಪದ ಕೇಳಿ ಎಲ್ಲರೂ ಶಾಕ್

Supreme Court : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದಿರುವ ನಟ ದರ್ಶನ್ ಅವರಿಗೆ ಇನ್ನೂ ಕೂಡ ಕಾನೂನು ಸಂಕಷ್ಟ ತಪ್ಪಿಲ್ಲ. ಏಕೆಂದರೆ ದರ್ಶನ್ ಅವರ ಜಾಮೀನನ್ನು ರದ್ದು ಮಾಡುವಂತೆ ಕೋರಿ ಖಾಕಿ ಪಡೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಹೀಗಾಗಿ ದರ್ಶನ್ ಅವರಿಗೆ ಯಾವ ಕ್ಷಣದಲ್ಲಿ ಏನಾಗುತ್ತದೆ ಎಂಬ ಭಯ ಕಾಡುತ್ತಿದೆ.
ಇಂದು ಸುಪ್ರೀಂ ಕೋರ್ಟ್‌ನಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ಕೂಡ ನಡೆದಿದ್ದು, ವಿಚಾರಣೆ ಮೇ 14ಕ್ಕೆ ನ್ಯಾಯಾಲಯ ಮುಂದೂಡಿದೆ. ಆದರೆ ಈ ಸಮಯದಲ್ಲಿ ದರ್ಶನ್ ಮತ್ತು ಪವಿತ್ರಾ ಗೌಡ ಅವರ ಸಂಬಂಧದ ಕುರಿತು ನ್ಯಾ.ಜೆ.ಬಿ.ಪರ್ದಿವಾಲಾ, ನ್ಯಾ. ಮಹದೇವರ್ ಅವರಿದ್ದ ದ್ವಿ ಸದಸ್ಯ ಪೀಠ ದರ್ಶನ್‌ಗೆ ಮದುವೆ ಆಗಿದೆಯೇ ? ಪವಿತ್ರಾ ಗೌಡ ದರ್ಶನ್ ಪತ್ನಿಯೇ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ಸರ್ಕಾರದ ಪರ ವಕೀಲರಾದ ಸಿದ್ಧಾರ್ಥ್ ಲೂಥ್ರಾ ಬಳಸಿದ ಪದ ಅಲ್ಲಿದ್ದವರನ್ನು ಅಚ್ಚರಿಗೆ ದೂಡಿದೆ.
ಯಾಕೆಂದರೆ ನ್ಯಾಯಾಧೀಶರ ಪ್ರಶ್ನೆಗೆ ಉತ್ತರಿಸಿದ ಸಿದ್ಧಾರ್ಥ್ ಲೂಥ್ರಾ, ಮಿಸ್ಟ್ರೆಸ್ಟ್ ಎಂಬ ಪದ ಬಳಸಿದ್ದಾರೆ. ಈ ಒಂದು ಪದವನ್ನು ಕೇಳಿ ನ್ಯಾಯಾಲಯದಲ್ಲಿ ನೆರೆದಿದ್ದವರೆಲ್ಲರೂ ಕೂಡ ಒಮ್ಮೆ ಅಚ್ಚರಿಪಟ್ಟಿದ್ದಾರೆ.
ಅಂದಹಾಗೆ ಮಿಸ್ಟ್ರೆಸ್ ಪದಕ್ಕೆ ಇಂಗ್ಲೀಷ್‌ನಲ್ಲಿ ಎರಡು ಅರ್ಥಗಳಿವೆ. ಅಧಿಕಾರದಲ್ಲಿರುವ ಅಥವಾ ಉನ್ನತ ಸ್ಥಾನದಲ್ಲಿರುವ ಮಹಿಳೆಯರನ್ನು ಮಿಸ್ಟ್ರೆಸ್ ಎಂದು ಕರೆಯಲಾಗುತ್ತೆ. ಇದನ್ನು ಹೊರತು ಪಡಿಸಿದರೆ ವಿವಾಹಿತ ಪುರುಷನ ಜೊತೆ ಲೈಂಗಿ*ಕ ಸಂಬಂಧ ಹೊಂದಿರುವ ಮಹಿಳೆಯನ್ನು ಕೂಡ ಮಿಸ್ಟ್ರೆಸ್ ಎಂದು ಕರೆಯಲಾಗುತ್ತೆ. ಕನ್ನಡದಲ್ಲಿ ಒಂದರ್ಥದಲ್ಲಿ ಇಟ್ಟುಕೊಂಡವಳು ಎಂಬ ಅರ್ಥ ಬರುತ್ತೆ.
Comments are closed.