Admission Rules : 1 ನೇ ತರಗತಿ ಸೇರಲು ವಯೋಮಿತಿ ಸಡಿಲಿಸಿದ ಸರ್ಕಾರ – ಕೋರ್ಟ್ ಮೆಟ್ಟಿಲೇರಿದ ಖಾಸಗಿ ಶಾಲೆಗಳು

Share the Article

Admission Rules: ಮಕ್ಕಳನ್ನು ಒಂದನೇ ತರಗತಿಗೆ ಸೇರಿಸಲು ಕೇಂದ್ರ ಸರ್ಕಾರ ಹೊಸ ನಿಯಮವನ್ನು ಜಾರಿಗೊಳಿಸಿದ್ದು, ಇದರಿಂದಾಗಿ ಯುಕೆಜಿ ತೇರ್ಗಡೆ ಹೊಂದಲಿರುವ ಲಕ್ಷಾಂತರ ಮಂದಿ ಮಕ್ಕಳು ದಾಖಲಾತಿ ಪಡೆಯಲು ಆಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಈಗ ಈ ನಿಯಮದ ಕುರಿತಾಗಿ ಹೊಸದಾಗಿ ಮಕ್ಕಳನ್ನು ಶಾಲೆಗೆ ಸೇರಿಸುವ ಬಗ್ಗೆ ಪೋಷಕರಿಗೆ ಶಿಕ್ಷಣ ಸಚಿವರು ಭರ್ಜರಿ ಗುಡ್ ನ್ಯೂಸ್ ನೀಡಿದ್ದು 5 ವರ್ಷ 5 ತಿಂಗಳಾಗಿದ್ದರೂ ಶಾಲೆಗೆ ಸೇರಿಸಲು ಈ ವರ್ಷ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಘೋಷಿಸಿದ್ದಾರೆ. ಆದರೆ ಈ ಬೆನ್ನಲ್ಲೇ ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಖಾಸಗಿ ಶಾಲೆಗಳ ಒಕ್ಕೂಟ ಕೋರ್ಟ್ ಮೆಟ್ಟಿಲೇರಿವೆ.

ಹೌದು, ಸರ್ಕಾರದ ಈ ವಿನಾಯತಿ ಈಗ ಮತ್ತೊಂದು ಹೊಸ ಸಂಘರ್ಷಕ್ಕೆ ಕಾರಣವಾಗಿದೆ. ಸರ್ಕಾರದ ನಡೆ ಪ್ರಶ್ನಿಸಿ ಕೆಲ ಖಾಸಗಿ ಶಾಲೆಗಳ ಒಕ್ಕೂಟ (Private Schools’ Association) ಕೋರ್ಟ್ ಮೆಟಿಲ್ಲೇರಲು ಮುಂದಾಗಿವೆ.

ಅಂದಹಾಗೆ ಸರ್ಕಾರವು ಈ ವರ್ಷ 1ನೇ ತರಗತಿ ದಾಖಲಾತಿಗೆ 5.5 ವರ್ಷ ತುಂಬಿರಬೇಕು ಜೊತೆಗೆ ಯುಕೆಜಿ ಅಥವಾ ಅಂಗನವಾಡಿ ಗ್ರೇಡ್ – 2 ಕಂಪ್ಲಿಟ್ ಆಗಿರಬೇಕು ಅಂತಾ ಕಂಡಿಷನ್ ಮೇಲೆ ಅವಕಾಶ ನೀಡಿದೆ. ಜೊತೆಗೆ ಮುಂದಿನ ವರ್ಷ ಕಡ್ಡಾಯ 6 ವರ್ಷ ಒಂದನೇ ತರಗತಿ ದಾಖಲಾತಿಗೆ ತುಂಬಿರಬೇಕು ಅಂತಾ ಹೇಳಿದೆ. ಆದರೆ ಇದು ಸಿಬಿಎಸ್​ಇ ಹಾಗೂ ಐಸಿಎಸ್ಇ ಶಾಲೆಗಳು ಗೊಂದಲಕ್ಕೆ ಕಾರಣವಾಗಿದೆ.

ಕಳೆದ ವರ್ಷ ಸಿಬಿಎಸ್​ಇ ಬೋರ್ಡ್ ಒಂದನೇ ತರಗತಿ ದಾಖಲಾತಿಗೆ ಕಡ್ಡಾಯ 6 ವರ್ಷ ತುಂಬಿರಬೇಕು ಅಂತಾ ಆದೇಶ ನೀಡಿತ್ತು. ಆದರೆ ಶಿಕ್ಷಣ ಇಲಾಖೆ ರಾಜ್ಯದಲ್ಲಿ ಈ ವರ್ಷಕ್ಕೆ ಸಿಮೀತಗೊಳಸಿ 5.5 ಕ್ಕೆ ವಯೋಮಿತಿ ಇಳಿಕೆ ಮಾಡಿದೆ. ಸಿಬಿಎಸ್​ಇ ಬೋರ್ಡ್ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಹೀಗಾಗಿ ಸಿಬಿಎಸ್​ಇ ಶಾಲೆಗಳಿಗೆ ಒಂದನೇ ತರಗತಿಯ ದಾಖಲಾತಿಯ ಗೊಂದಲ ಕೇಳಿ ಬಂದಿದೆ. ಮತ್ತೊಂದಡೆ 1 ನೇ ತರಗತಿ ದಾಖಲಾತಿಗೆ ವಯೋಮಿತಿ ಸಡಲಿಕೆ ವಿರೋಧಿಸಿ ಕೋರ್ಟ್ ಮೆಟ್ಟಿಲೇರಲು ಖಾಸಗಿ ಶಾಲೆಗಳ ಒಕ್ಕೂಟ ಮುಂದಾಗಿದೆ. ಸರ್ಕಾರದ ನಡೆ ವಿರೋಧಿಸಿ ಕೋರ್ಟ್ ಮೊರೆ ಹೋಗಲು ಖಾಸಗಿ ಶಾಲೆಗಳ ಒಕ್ಕೂಟ ಮುಂದಾಗಿದೆ.

Comments are closed.