Rikki Rai: ರಿಕ್ಕಿ ರೈ ಫೈರಿಂಗ್ ಕೇಸ್ ಗೆ ಬಿಗ್ ಟ್ವಿಸ್ಟ್ – ಇಡೀ ಪ್ರಕರಣವೇ ಫೇಕ್?

Rikki Rai: ಮಾಜಿ ಡಾನ್ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಮೇಲೆ ಫೈರಿಂಗ್ ನಡೆದ ಪ್ರಕರಣ ಇಡೀ ರಾಜ್ಯದ್ಯಂತ ಸದ್ದು ಮಾಡಿತ್ತು. ಇದೀಗ ಈ ಫೈರಿಂಗ್ ಪ್ರಕರಣಕ್ಕೆ ಬಿಗ್ ಟ್ರಸ್ಟ್ ಸಿಕ್ಕಿದ್ದು ಇಡೀ ಪ್ರಕರಣವೆ ಫೇಕ್ ಎನ್ನಲಾಗುತ್ತಿದೆ
ರಿಕ್ಕಿ ರೈಗೆ ಒಂದು ಕಾಲದಲ್ಲಿ ಗನ್ ಮ್ಯಾನ್ ಆಗಿದ್ದ ವಿಠ್ಠಲ ಎಂಬಾತ ಕಾರಿನ ಮೇಲೆ ಫೈರಿಂಗ್ ಮಾಡಿದ್ದಾನೆಎಂಬ ಆರೋಪ ಕೇಳಿ ಬಂದಿದೆ. ಮಾಜಿ ಗನ್ ಮ್ಯಾನ್ ವಿಠ್ಠಲನನ್ನು ಬಿಡದಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ವಿಠ್ಠಲ ಬಹುಕಾಲದವರೆಗೆ ರಿಕ್ಕಿ ರೈನ ಗನ್ ಮ್ಯಾನ್ ಆಗಿದ್ದ. ಅನಾರೋಗ್ಯ ಹಿನ್ನೆಲೆ ರಿಕ್ಕಿ ಫಾರ್ಮ್ ಹೌಸ್ ನಲ್ಲಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದಾನೆ.ಶೂಟೌಟ್ ರಾತ್ರಿ ವಿಠ್ಠಲ, ರಿಕ್ಕಿ ಜೊತೆಗೆ ಪರ್ಸನಲ್ ಆಗಿ ಮಾತನಾಡಿದ್ದಾನೆ ಎನ್ನಲಾಗಿದೆ. ರಿಕ್ಕಿ ಕಾರು ಹೊರಡುವ ಸ್ವಲ್ಪ ಸಮಯದ ಮುನ್ನ ವಿಠ್ಠಲ ಫಾರ್ಮ್ ಹೌಸ್‌ನಿಂದ ಹೊರಗೆ ಹೋಗಿದ್ದಾನೆ. ಶೂಟೌಟ್ ನಡೆದು ರಿಕ್ಕಿ ಆಸ್ಪತ್ರೆ ಸೇರಿದ ಬಳಿಕ ವಿಠ್ಠಲ ಫಾರ್ಮ್ ಹೌಸ್‌ಗೆ ಬಂದಿದ್ದಾನೆ. ಇದು ಪೊಲೀಸರ ಅನುಮಾನಕ್ಕೆ ಕಾರಣವಾಗಿದೆ.
ಇನ್ನು ವಿಠ್ಠಲ ಮಡಿಕೇರಿ ಮೂಲದವನಾಗಿದ್ದು, ಆತನ ಬಳಿ ಎರಡು ಏರ್‌ಗನ್ ಮತ್ತು ಎರಡು ಲೈಸೆನ್ಸ್ಡ್ ಶಾಟ್ ಗನ್‌ಗಳಿವೆ ಎಂದು ತಿಳಿದು ಬಂದಿದೆ.
Comments are closed.