Kamal Haasan: ತ್ರಿಶಾಗೆ ʼಬಾಳೆಹಣ್ಣುʼ ಇಷ್ಟ ಎಂದು ನಟ ಕಮಲ್‌ ಹಾಸನ್‌; ನೆಟ್ಟಿಗರು ಗರಂ!

Share the Article

Kamal Haasan: ಕಾಲಿವುಡ್‌ ನಟ ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಚಿತ್ರದ ಪ್ರಚಾರದ ಸಂದರ್ಭದಲ್ಲಿ ನಟಿ ತ್ರಿಷಾ ಕೃಷ್ಣನ್‌ ಅವರನ್ನು ಉದ್ದೇಶಿಸಿ, ಬಾಳೆಹಣ್ಣಿನ ಕುರಿತು ಹಾಸ್ಯ ಮಾಡಿರುವುದು ನೆಟ್ಟಿಗರಿಗೆ ಆಕ್ರೋಶ ಉಂಟು ಮಾಡಿದೆ.

ಥಗ್‌ ಲೈಫ್‌ ಚಿತ್ರದ ಪ್ರಚಾರದ ಸಂದರ್ಭದಲ್ಲಿ ನಟಿ ತ್ರಿಷಾ ಅವರು ನೆಚ್ಚಿನ ಖಾದ್ಯದ ಕುರಿತು ಹೇಳುತ್ತಾ, ಬೇಯಿಸಿ ಬಾಳೆಹಣ್ಣಿನಿಂದ ಮಾಡಿದ ಖಾದ್ಯ ನನಗೆ ಇಷ್ಟ ಎಂದು ಹೇಳಿದ್ದಾರೆ. ಹೆಸರು ನೆನಪು ಮಾಡಿಕೊಳ್ಳಲು ಸಾಧ್ಯವಾಗದೇ ಇದ್ದಾಗ, ಕಮಲ್‌ ಹಾಸನ್‌ ಮಧ್ಯಪ್ರವೇಶಿಸಿ ʼಪಳಮ್‌ ಪೋರಿʼ ಎಂದಿದ್ದಾರೆ.

ನಂತರ ಕಮಲ್‌ ಹಾಸನ್‌ ತ್ರಿಶಾ ಅವರನ್ನು ಉದ್ದೇಶಿಸಿ, ʼಅವಳಿಗೆ ಹೆಸರು ಗೊತ್ತಿಲ್ಲ. ಅದನ್ನು ಬಾಯಿಯಲ್ಲಿ ಇಟ್ಟುಕೊಳ್ಳಲು ಇಷ್ಟಪಡುತ್ತಾಳೆʼ ಎಂದು ಹೇಳಿದ್ದಾರೆ.

ಇದನ್ನು ತ್ರಿಶಾ ಸೇರಿ ಎಲ್ಲರೂ ನಕ್ಕಿದ್ದಾರೆ. ಆದರೆ ನೆಟ್ಟಿಗರು ಇದು ಡಬಲ್‌ ಮೀನಿಂಗ್‌ ಬರುವ ಧಾಟಿಯಲ್ಲಿ ಹೇಳಿದ್ದಾರೆ ಎಂದು ಕಮೆಂಟ್‌ ಮಾಡಿದ್ದಾರೆ. ಹಿರಿಯ ನಟನಾಗಿ ಈ ರೀತಿ ಹೇಳುವುದು ಅಸಹ್ಯಕರ ಎಂದು ಕಮೆಂಟ್‌ ಮಾಡಿದ್ದಾರೆ.

Comments are closed.