Pruthvi Bhat: ಪೃಥ್ವಿ ಭಟ್ ಪ್ರೇಮ ವಿವಾಹಕ್ಕೆ ಟ್ವಿಸ್ಟ್ – ಪೃಥ್ವಿ ಭಟ್ ಆಡಿಯೋ ವೈರಲ್

Pruthvi Bhat: ಜನಪ್ರಿಯ ರಿಯಾಲಿಟಿ ಶೋ ಸರಿಗಮಪ ಮೂಲಕ ಜನಪ್ರಿಯತೆ ಪಡೆದಿರುವ ಕಾಸರಗೋಡಿನ ಪೃಥ್ವಿ ಭಟ್ ಇತ್ತೀಚಿಗಷ್ಟೇ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಖ್ಯಾತ ಗಾಯಕಿ ಪ್ರಥ್ವಿ ಭಟ್ ಕಳೆದ ಕೆಲವು ದಿನಗಳ ಹಿಂದೆ ಮನೆಯವರನ್ನು ವಿರೋಧಿಸಿ ಅಭಿಷೇಕ್ ಎನ್ನುವವರನ್ನು ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಈ ಬೆನ್ನಲ್ಲೇ ಆಕೆಯ ಪೋಷಕರು ವಶೀಕರಣದ ಆರೋಪ ಮಾಡಿದ್ದು ಸರಿಗಮಪ ಜೂರಿ ನರಹರಿ ದೀಕ್ಷಿತ್ ಅವರು ಇದಕ್ಕೆ ಕಾರಣ ಎಂದಿದ್ದಾರೆ.
ನಿನ್ನೆ ಪೃಥ್ವಿ ಭಟ್ ತಂದೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋವೊಂದು ಈಗ ಎಲ್ಲೆಡೆ ವೈರಲ್ ಆಗುತ್ತಿದ್ದು, ಈ ಆಡಿಯೋದಲ್ಲಿ ಪೃಥ್ವಿ ಭಟ್ ತಂದೆ ಸಂಗೀತ ಶಿಕ್ಷಕ ನರಹರಿ ದೀಕ್ಷಿತ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ನರಹರಿ ದೀಕ್ಷಿತ್ ಅವರಿಂದಲೇ ನನ್ನ ಮಗಳು ಹೀಗೆ ಆಗಲು ಕಾರಣ ಎಂದು ಅವರು ಮಾತನಾಡಿದ ಆಡಿಯೋ ವೈರಲ್ ಆಗಿತ್ತು. ಇದೀಗ ಮಗಳು ಪೃಥ್ವಿ ಭಟ್ ಆಡಿಯೋ ಒಂದು ವೈರಲ್ ಆಗಿದೆ.
ಗಾಯಕಿ ಪೃಥ್ವಿ ಭಟ್ ಹೇಳಿದ್ದೇನು?
‘ತಪ್ಪಾಯ್ತು ಅಪ್ಪ. ನೀವು ಕಳೆದ ಎರಡು ದಿನಗಳಿಂದ ಹವ್ಯಕ ಗ್ರೂಪ್ ಸೇರಿದಂತೆ ಮತ್ತೆ ಬೇರೆ ಬೇರೆ ಗ್ರೂಪ್‌ಗಳಲ್ಲಿ ನರಹರಿ ದೀಕ್ಷಿತ್ ಸರ್ ಬಗ್ಗೆ ಮತ್ತೆ ನನ್ನ ಬಗ್ಗೆ ಆಡಿಯೋ ಮೆಸೇಜ್ ಕಳುಹಿಸುತ್ತಿದ್ದೀರಿ. ಈ ವಿಷಯದಲ್ಲಿ ನರಹರಿ ದೀಕ್ಷಿತ್ ಸರ್ ಅವರ ತಪ್ಪು ಏನಿಲ್ಲ. ಮಾರ್ಚ್ 7ಕ್ಕೆ ದೀಕ್ಷಿತ್ ಸರ್ ಮನೆಗೆ ಬಂದಿದ್ದು, ಈ ವಿಷಯ ಬಗ್ಗೆ ಮಾತನಾಡಿದರು. ಆಗ ನಾನು ಅವರ ಎದುರು ಹಾಗೂ ನಿಮ್ಮ ಎದುರು ಅಭಿ ಇಷ್ಟ ಅಂತನೇ ಹೇಳಿದ್ದು. ಅವತ್ತು ನಿಮ್ಮ ಮೇಲಿನ ಭಯಕ್ಕೆ ನಾನು ಸುಮ್ಮನಾದೆ, ಆದರೆ ನನ್ನ ಮನಸಿನಲ್ಲಿ ಅಭಿ ಇದ್ದರು. ಅದಾದ ಮೇಲೆ ನೀವು ನನ್ನನ್ನು ಕಟ್ಟುನಿಟ್ಟು ಮಾಡಿದಿರಿ.
ಕಾರ್ಯಕ್ರಮಗಳಿಗೆ ಹೋಗುವುದು ಬೇಡ ಅಂದಿರಿ. ಸಂಗೀತ ಬೇಡ ಅಂತಾ ಹೇಳಿದಿರಿ ಅದಕ್ಕೆ ಭಯಪಟ್ಟು ನಾನೇ ಈ ನಿರ್ಧಾರ ಮಾಡಿರುವುದು. ನಾನು ಮೊದಲು ಹೇಳಿದ ಹಾಗೆ ಈಗಲೂ ಹೇಳುತ್ತಿದ್ದೇನೆ. ನರಹರಿ ದೀಕ್ಷಿತ್ ಸರ್ ಅವರ ತಪ್ಪು ಏನಿಲ್ಲ. ನಮ್ಮ ಮದುವೆಯ ದಿನ ಅವರಿಗೆ ಗೊತ್ತಿರಲಿಲ್ಲ. ಆಮೇಲೆ ನಾನು ಫೋನ್ ಮಾಡಿ ಬರಲು ಹೇಳಿದ್ದು, ಆಮೇಲೆ ಅವರು ನನಗೆ ಅಭಿಗೆ ಆಶೀರ್ವಾದ ಮಾಡಿದರು. ಇದರಲ್ಲಿ ಅವರ ತಪ್ಪಿಲ್ಲ. ನಾನು ಮಾಡಿರುವುದು ಖಂಡಿತಾ ತಪ್ಪು, ಕ್ಷಮಿಸಿ’ ಎಂದು ಪೃಥ್ವಿ ಭಟ್ ಹೇಳಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗುತ್ತಿದೆ.
Comments are closed.