Heavy Rain: ಚೆಟ್ಟಳ್ಳಿಯಲ್ಲಿ ಮರಬಿದ್ದು ಕಾರ್ಮಿಕ ದುರ್ಮರಣ

Heavy Rain: ಮರ ಕಪಾತು(Tree Trimming) ಮಾಡುತ್ತಿದ್ದ ಸಂದರ್ಭ ಕಾರ್ಮಿಕನ(Worker) ಮೇಲೆ ಮರ ಬಿದ್ದ ಪರಿಣಾಮ ಸ್ಥಳದಲ್ಲಿಯೇ ಮೃತ(Dead) ಪಟ್ಟ ಘಟನೆ ಚೆಟ್ಟಳ್ಳಿ ಕಾಫಿ ತೋಟವೊಂದರಲ್ಲಿ(Coffee Plantation ) ನಡೆದಿದೆ. ಚೆಟ್ಟಳ್ಳಿ ಕಾಫಿ ಬೋರ್ಡ್(Coffee board) ಸಮೀಪದಲ್ಲಿರುವ ಮೇಜರ್ ಕೊಂಗೇಟಿರ ಮೊಣ್ಣಪ್ಪರವರ ಕಾಫಿ ತೋಟದಲ್ಲಿ ನಿನ್ನೆ ಮಧ್ಯಾಹ್ನ ದುರಂತ ಸಂಭವಿಸಿದ್ದು ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕಾರ್ಮಿಕ ಮಣಿ(25) ಎಂಬಾತ ದಾರುಣವಾಗಿ ಅಂತ್ಯ ಸಾವನ್ನಪ್ಪಿದ್ದಾರೆ.

ಇವರು ತೋಟದಲ್ಲಿ ಮರಕಪಾತು ಕೆಲಸ ಮಾಡಿಸುತ್ತಿದ್ದ ಸಂದರ್ಭ ಮಳೆ ಬರುತಿದ್ದ ಕಾರಣಕ್ಕೆ ಕಾರ್ಮಿಕನೋರ್ವನನ್ನು ಏಣಿಯಿಂದ ಇಳಿಸಲು, ಮತ್ತೊಬ್ಬ ಕಾರ್ಮಿಕ ಮಣಿ, ತೆರಳಿದ ಸಂದರ್ಭ ಮಳೆಗಾಳಿಯ ರಭಸಕ್ಕೆ ಪಕ್ಕದಲ್ಲಿ ಸುಮಾರು 60 ಅಡಿ ಎತ್ತದ ಬಳಂಜಿ ಬರವು ಕಾರ್ಮಿಕ ಮಣಿ ಎಂಬಾತ ಮೇಲೆ ಬಿದ್ದ ಪರಿಣಾಮ ಸ್ಥಳದಲ್ಲೇ ಮ್ರತಪಟ್ಟಿರುತ್ತಾನೆ.
ಮಾಹಿತಿ ತಿಳಿದ ತಕ್ಷಣ ಚೆಟ್ಟಳ್ಳಿ ಉಪಠಾಣಾಧಿಕಾರಿ ಎಎಸ್ಐ ದಿನೇಶ್ ಎಂ.ಎನ್ ಹಾಗು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಮಡಿಕೇರಿ ಗ್ರಾಮಾಂತರ ಠಾಣಾ ಪೋಲೀಸ್ ನಿರೀಕ್ಷರಾದ ಚಂದ್ರ ಶೇಖರ್ ಹಾಗು ಪಿಎಸ್ ಐ ಶ್ರೀನಿವಾಸಲು ಹಾಗು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
Comments are closed.