Wing Commander: ಕಾರು ಅಡ್ಡಗಟ್ಟಿ ವಿಂಗ್‌ ಕಮಾಂಡರ್‌ ಮೇಲೆ ಹಲ್ಲೆ; ಕಾರಣವೇನು?

Share the Article

Wing Commander: ಕಾರು ಅಡ್ಡಗಟ್ಟಿ ವಿಂಗ್‌ ಕಮಾಂಡರ್‌ ಮೇಲೆ ಬೈಕ್‌ ಸವಾರರು ಹಲ್ಲೆ ಮಾಡಿದ ಘಟನೆ ಸಿವಿ ರಾಮನ್‌ ನಗರದಲ್ಲಿ ನಡೆದಿದ್ದು ಕಾರಿನ ಮೇಲೆ ಇದ್ದ DRDO ಸ್ಟಿಕ್ಕರ್‌ ನೋಡಿ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ವಿಂಗ್‌ ಕಮಾಂಡರ್‌ ಶಿಲಾದಿತ್ಯ ಬೋಸ್‌ ಕೋಲ್ಕತ್ತಾಗೆ ಹೋಗಲೆಂದು ಸೋಮವಾರ ಏರ್‌ಪೋರ್ಟ್‌ಗೆ ಹೋಗುತ್ತಿದ್ದು, ಅವರ ಪತ್ನಿ ಕಾರು ಚಲಾಯಿಸುತ್ತಿದ್ದರು. ಈ ವೇಳೆ ಹಿಂಬಂದಿಯಿಂದ ಬಂದ ಬೈಕ್‌ ಟಚ್‌ ಆಗಿದೆ. ಬೈಕ್‌ ಸವಾರರು ಕಾರನ್ನು ತಡೆದು, ಕಾರಿನ ಕೀ ತಗೊಂಡು ವಿಂಗ್‌ ಕಮಾಂಡರ್‌ ಮೇಲೆ ಹಲ್ಲೆ ಮಾಡಿದ್ದಾರೆ.

ಈ ಕುರಿತು ಬೈಯಪ್ಪನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

Comments are closed.