Ayodhya: ಅಯೋಧ್ಯೆಯಲ್ಲಿ ಬಿಜೆಪಿಯನ್ನು ಸೋಲಿಸಿದ್ದು ಯಾಕೆ? ಟಾರ್ ಇರೋ ಡ್ರಮ್ ಗೆ ಜಿಗಿದು ಬಾಬಾ ಪ್ರೊಟೆಸ್ಟ್ !!

Share the Article

Ayodhya: ಕಳೆದ ಲೋಕಸಭಾ ಚುನಾವಣೆಯಲ್ಲಿ ಅಯೋಧ್ಯೆಯಲ್ಲಿಯೇ ಬಿಜೆಪಿ ಹೀನಾಯವಾಗಿ ಸೋಲನ್ನು ಕಂಡಿತ್ತು. ಭವ್ಯ ರಾಮಮಂದಿರ ನಿರ್ಮಿಸಿ ಜನರನ್ನು ಭಾವನಾತ್ಮಕವಾಗಿ ಕಟ್ಟಿಹಾಕಲು ಮುಂದಾದ ಬಿಜೆಪಿ ಎಡವಿ ಬಿದ್ದಿತ್ತು. ಇದೀಗ ಲೋಕಸಭಾ ಚುನಾವಣೆ ಮುಗಿದು ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷಗಳು ಕಳೆಯುತ್ತಿವೆ. ಇದೀಗ ಅಯೋಧ್ಯೆಯಲ್ಲಿ ಬಿಜೆಪಿಯನ್ನು ಸೋಲಿಸಿದ್ದು ಏಕೆ ಎಂದು ಪ್ರಶ್ನೆ ಹಾಕಿ ಬಾಬಾ ಒಬ್ಬರು ವಿಚಿತ್ರವಾಗಿ ಪ್ರೊಟೆಸ್ಟ್ ನಡೆಸಿದ್ದಾರೆ.

https://x.com/lalluram_news/status/1914249244623487221?t=xlLULd-a4oYHhG3jsKq_HQ&s=19

ಹೌದು, ಟಾರ್ ಡ್ರಮ್ ಮೇಲೆ ನಿಂತಿರುವ ಬಾಬಾ, ನಾವು ಅಯೋಧ್ಯೆಯಲ್ಲಿ ಬಿಜೆಪಿಯನ್ನು ಏಕೆ ಸೋಲಿಸಿದೆವು? ಎಂದು ಪ್ರಶ್ನೆ ಮಾಡಿ ರಸ್ತೆಬದಿಯಲ್ಲಿದ್ದ ಟಾ‌ರ್ ತುಂಬಿದ ಡ್ರಮ್‌ಗೆ ಹಾರಿದ್ದಾರೆ. ನಂತರ ಆ ಡ್ರಮ್ ನಲ್ಲಿದ್ದ ಟಾರ್ ಗೆ ಸಿಲುಕಿ ಅಂಟಿಕೊಂಡಿದ್ದಾರೆ. ಆ ಬಳಿಕ ಅದೇ ಸ್ಥಿತಿಯಲ್ಲಿ ನಿಂತು ಪ್ರಧಾನಿ ನರೇಂದ್ರ ಮೋದಿ ಕೀ ಜೈ, ಭಾರತ್ ಮಾತಾ ಕಿ ಜೈ ಎಂದು ಜೋರಾಗಿ ಘೋಷಣೆಗಳನ್ನು ಕೂಗಿದ್ದಾರೆ. ಮಾಹಿತಿ ತಿಳಿದು ಪೊಲೀಸರ ಸ್ಥಳಕ್ಕೆ ಆಗಮಿಸಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Comments are closed.