Udupi: ಸ್ಕೂಟಿಯಲ್ಲಿ ಐದು ಮಂದಿ ಪ್ರಯಾಣ; ಪ್ರಕರಣ ದಾಖಲು, ಭರ್ಜರಿ ದಂಡ!

Share the Article

Udupi: ಸ್ಕೂಟಿವೊಂದರಲ್ಲಿ ನಾಲ್ಕು ಮಂದಿ ಸಹ ಸವಾರರನ್ನು ಕುಳ್ಳಿರಿಸಿಕೊಂಡು ಸವಾರಿ ಮಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಈ ಕುರಿತು ಮಣಿಪಾಲ ಪೊಲೀಸರು ಸ್ಕೂಟರನ್ನು ರವಿವಾರ ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಿದ್ದಾರೆ.

ಸ್ಕೂಟರ್‌ ಸವಾರರು ಹಾಗೂ ಸ್ಕೂಟರನ್ನು ಎ.17 ರಂದು ಪತ್ತೆ ಮಾಡಲಾಗಿದ್ದು, ಇದರಲ್ಲಿ ಮೂವರು ಅಪ್ರಾಪ್ತರು ಎನ್ನುವ ವಿಷಯ ಬೆಳಕಿಗೆ ಬಂದಿದೆ. ಐವರು ವಿದ್ಯಾರ್ಥಿಗಳಾಗಿದ್ದು, ಸ್ಕೂಟರ್‌ ಚಾಲನೆ ಮಾಡಿದ ಸವಾರನಿಗೆ ಮೋಟಾರು ವಾಹನ ಕಾಯ್ದೆಯನ್ನು ಉಲ್ಲಂಘನೆ ಮಾಡಿ ಅಪಾಯಕಾರಿಯಾಗಿ ವಾಹನ ಚಾಲನೆ ಮಾಡಿದ್ದಕ್ಕೆ ರೂ.10,500 ದಂಡ ವಿಧಿಸಲಾಗಿದೆ.

Comments are closed.