TB Dam: ತುಂಗಭದ್ರಾ ಡ್ಯಾಂ 33 ಗೇಟ್ಗಳ ಬದಲು: ₹80 ಕೋಟಿಗೆ ಟೆಂಡರ್ ಆಹ್ವಾನ 

Share the Article

TB Dam: ತುಂಗಭದ್ರಾ ಜಲಾಶಯದ(Tunga bhadra Dam) 19ನೇ ಕ್ರಸ್ಟ್ ಗೇಟ್(Crust gate) ಸೇರಿದಂತೆ ಎಲ್ಲ 33 ಗೇಟ್‌ಗಳನ್ನು ಬದಲಿಸಲು ತುಂಗಭದ್ರಾ ಮಂಡಳಿ ಟೆಂಡರ್(Tender) ಪ್ರಕ್ರಿಯೆ ಆರಂಭಿಸಿದೆ. ಜಲಾಶಯ ಗೇಟ್ ತಜ್ಞ ಕನ್ನಯ್ಯ ನಾಯ್ಡು ಮಾರ್ಗದರ್ಶನದಲ್ಲಿ ಮಂಡಳಿಯ ಅಧಿಕಾರಿಗಳು ₹80 ಕೋಟಿಗೆ ಟೆಂಡರ್ ಆಹ್ವಾನಿಸಿದ್ದಾರೆ. ಏಪ್ರಿಲ್ 19ರಿಂದ 25ರವರೆಗೆ ಟೆಂಡರ್ ದಾಖಲಿಸಲು ಅವಕಾಶವಿದ್ದು, ಏ.28ರಂದು ಟೆಂಡರ್ ಓಪನ್ ಮಾಡಿ ಮೇ 2ರಂದು ಕಾಮಗಾರಿಗಳನ್ನು ಗುತ್ತಿಗೆದಾರರಿಗೆ ನೀಡಲಿದ್ದಾರೆ. 15 ತಿಂಗಳಲ್ಲಿ ಕೆಲಸ ಮುಗಿಯಲಿದೆ ಎಂದು ವರದಿಯಾಗಿದೆ. ರೈತರಿಗೆ ಎರಡು ಬೆಳೆಗಳಿಗೆ ಸಮರ್ಪಕವಾಗಿ ನೀರು ನೀಡಿದ ನಂತರ ಇದೀಗ ಡ್ಯಾಮ್‌ ಒಡಲು ಖಾಲಿಯಾಗಿದ್ದು, ಪ್ರಸ್ತುತ ಗೇಟ್‌ಗಳ ಬದಲಾವಣೆ ಬಗ್ಗೆ ಚುರುಕಿನ ಕೆಲಸಗಳು ನಡೆಯುತ್ತಿವೆ.

ಕಳೆದ ವರ್ಷ ಭಾರಿ ಮಳೆಯಾಗಿದ್ದ ಹಿನ್ನೆಲೆ ಆಗಸ್ಟ್‌ 10 ರಂದು ರಾತ್ರಿ 105.788 ಟಿಎಂಸಿ ಸಂಗ್ರಹ ಸಾಮರ್ಥ್ಯದ ಡ್ಯಾಂ ಗರಿಷ್ಟ ಸಂಗ್ರಹ ಮಟ್ಟ ದಾಖಲಾಗಿತ್ತು. ಅದೇ ದಿನ 19ನೇ ಕ್ರಸ್ಟ್‌ ಗೇಟ್‌ ಕೊಚ್ಚಿಕೊಂಡು ಹೋಗಿ ಇಡೀ ಜಲಾಶಯದ ಸದೃಢತೆ ಬಗ್ಗೆ ಅನುಮಾನ ಹುಟ್ಟುವಂತಾಗಿತ್ತು. ನಂತರ ತಜ್ಞರ ಸಹಾಯದಿಂದ ಗೇಟ್‌ಗೆ ತಾತ್ಕಾಲಿಕವಾಗಿ ಸ್ಟಾಪ್‌ ಲಾಗ್‌ ಅಳವಡಿಸಿ ನೀರು ಹರಿದು ಹೋಗುವುದನ್ನು ನಿಲ್ಲಿಸಲಾಗಿತ್ತು. ಮತ್ತದೇ ಪ್ರಮಾಣದ ನೀರು ತುಂಬಿಕೊಂಡಿತ್ತು. ಇದೀಗ ಮತ್ತೆ ಮಳೆಗಾಲ ಆರಂಭವಾಗುವ ಮೊದಲು ತಜ್ಞರ ತಂಡಗಳಿಂದ ಅಧ್ಯಯನ ನಡೆಸಲಾಗಿತ್ತು. ಹಾಗಾಗಿ ಮತ್ತೆ ಕಳೆದ ವರ್ಷದಂತೆ ಅವಘಡ ಸಂಭವಿಸುವುದು ಬೇಡವೆಂದು ಗೇಟ್‌ಗಳ ಅಳವಡಿಕೆಗೆ ಕಾರ್ಯ ನಡೆಸಲಾಗುತ್ತಿದೆ.

Comments are closed.